Advertisement

5ಜಿ: ನವದೆಹಲಿಯಲ್ಲಿ 10,000 ಸ್ಥಳಗಳಲ್ಲಿ ಟವರ್‌ ಸ್ಥಾಪನೆ

08:55 PM Sep 30, 2022 | Team Udayavani |

ನವದೆಹಲಿ: ದೇಶದಲ್ಲಿ 5ಜಿ ಸೇವೆಗಳು ಚಾಲನೆ ಪಡೆಯುತ್ತಿರುವ ನಡುವೆಯೇ ಅದರ ಲಭ್ಯತೆಗಾಗಿ ಸಣ್ಣ ಟವರ್‌ಗಳನ್ನು ಸ್ಥಾಪಿಸಲು ನವದೆಹಲಿಯಲ್ಲಿ ಸುಮಾರು 10,000 ಸ್ಥಳಗಳನ್ನು ದೆಹಲಿ ಲೋಕೋಪಯೋಗಿ ಇಲಾಖೆ ಗುರುತಿಸಿದೆ.

Advertisement

5ಜಿ ಸೇವೆಗಳಿಗಾಗಿ ಸಣ್ಣ ಟವರ್‌ಗಳನ್ನು ಸ್ಥಾಪಿಸಲು ದೂರಸಂಪರ್ಕ ಇಲಾಖೆಗೆ ಮೂಲಸೌಕರ್ಯ ಸಂಬಂಧಿತ ಬೆಂಬಲವನ್ನು ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನೀಡಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಟವರ್‌ಗಳ ಸ್ಥಾಪನೆ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಸರ್ವೆಯಲ್ಲಿ ಸ್ಥಳ ಗುರುತಿಸಲಾಗಿದ್ದು, ಈ ಕುರಿತ ವರದಿಯನ್ನು ದೆಹಲಿ ಸರ್ಕಾರಕ್ಕೆ ಸೇರಿದ ಜಿಯೋಸ್ಪೇಶಿಯಲ್‌ ದೆಹಲಿ ಲಿಮಿಟೆಡ್‌(ಜಿಎಸ್‌ಡಿಎಲ್‌)ಗೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next