ಮೃತರು ಮಾನ್ಯದ ಶಾಲೆಯೊಂದರಲ್ಲಿ ಈ ಹಿಂದೆ ಅಧ್ಯಾಪಕನಾಗಿದ್ದು, ಸ್ವಯಂ ನಿವೃತ್ತಿ ಹೊಂದಿದ್ದ ಪಿ.ವಿ. ಪ್ರದೀಪನ್ (51) ಎಂದು ಗುರುತು ಹಚ್ಚಲಾಗಿದೆ.
Advertisement
ಅವರು ಮಾ. 22ರಿಂದ ನಾಪತ್ತೆಯಾಗಿರುವುದಾಗಿ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸುತ್ತಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರು ಮಟ್ಟನ್ನೂರು ವೆಳ್ಳಿಪರಂಬು ಪಿ.ವಿ. ಅಂಬು ಅವರ ಪುತ್ರರಾಗಿರುವ ಮೃತರು ಪತ್ನಿ, ಅಧ್ಯಾಪಕಿ ಟಿ.ವಿ. ರಮ್ಯಾ ಮತ್ತು ಪುತ್ರಿಯನ್ನು ಅಗಲಿದ್ದಾರೆ.