Advertisement

‘ನೇತ್ರದಾನಿಗಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿ’

12:01 PM Nov 08, 2017 | |

ಉಳ್ಳಾಲ: ಜಿಲ್ಲಾದ್ಯಂತ ಹತ್ತು ಸಾವಿರ ನೇತ್ರದಾನಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಏಳು ಸಾವಿರ ಮಂದಿಯನ್ನು ಗುರುತಿಸಲಾಗಿದೆ. ಇನ್ನೂ ಮೂರು ಸಾವಿರ ದಾನಿಗಳ ಹುಡುಕಾಟದ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಕುಷ್ಠರೋಗ, ಅಂಧತ್ವ ನಿವಾರಣೆ ಇಲಾಖಾ ಅಧಿಕಾರಿ ಡಾ| ರತ್ನಾಕರ ಹೇಳಿದರು.

Advertisement

ಪಾನೀರು ದಯಾಮಾತೆ ಚರ್ಚ್‌, ಸಂತ ವಿನ್ಸೆಂಟ್‌ ಪಾವ್ಲ್ ಸಭಾ ಹಾಗೂ ಯುವಘಟಕದ ಸಂಯುಕ್ತ ಆಶ್ರಯ
ದಲ್ಲಿ ರವಿವಾರ ಚರ್ಚ್‌ ಸಭಾಂಗಣದಲ್ಲಿ ಜರಗಿದ ಹಿರಿಯರ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಣ್ಣುದಾನ ಮಾಡಿ
ಜೀವಿತಾವಧಿಯಲ್ಲಿ ಸ್ವಇಚ್ಛೆಯಿಂದ ಸಹಿ ಹಾಕಿ ಮರಣದ ಬಳಿಕ ಇನ್ನೊಬ್ಬರಿಗೆ ನೀಡಬಹುದಾದ ಕಣ್ಣಿನ ದಾನ ಅತಿ ದೊಡ್ಡ ದಾನವಾಗಿದೆ. ನಮ್ಮ ಕಣ್ಣುಗಳೂ ಶಾಶ್ವತವಲ್ಲ. ನೀರಿನಲ್ಲಿ ಬಿದ್ದು ಮೃತಪಟ್ಟವರು, ಎಚ್‌ಐವಿ ಪೀಡಿತರು, ಹಾವು ಕಡಿತದಿಂದ ಮೃತಪಟ್ಟವರು, ಹುಚ್ಚು ನಾಯಿ ಕಡಿತದಿಂದ ಮೃತಪಟ್ಟವರು ಹಾಗೂ ಮಧುಮೇಹಕ್ಕೆ ಒಳಗಾಗಿರುವ ರೋಗಿಗಳ ಕಣ್ಣುಗಳನ್ನು ಪಡೆಯಲಾಗದು ಉಳಿದವರು ಕಣ್ಣುಗಳನ್ನು ದಾನ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಸ್ಮರಣಿಕೆ ರೂಪದಲ್ಲಿ ವಸ್ತ್ರ ವಿತರಿಸಲಾಯಿತು. ಪಾನೀರ್‌ ದಯಾಮಾತೆ ಚರ್ಚ್‌ ಧರ್ಮಗುರು ವಂ| ಫಾ| ಡೆನ್ನಿಸ್‌ ಸುವಾರಿಸ್‌ ಅಧ್ಯಕ್ಷತೆ ವಹಿಸಿದ್ದರು.

ವಂ| ದಿಯೋಕಾನ್‌ ಬ್ರದರ್‌ ಅಶ್ವಿ‌ನ್‌ ಕ್ರಾಸ್ತಾ, ಬ್ರದರ್‌ ಜಿತೇಶ್‌ ಕ್ಯಾಸ್ಟೆಲಿನೋ, ಸಂತ ವಿನ್ಸೆಂಟ್‌ ಪಾವ್ಲ್  ಸಭಾ ದಕ್ಷಿಣ ವಲಯಾಧ್ಯಕ್ಷ ಬ್ಯಾಪ್ಟಿಸ್ಟ್‌ ಡಿ’ಸೋಜಾ, ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್‌ ಡಿ’ಸೋಜಾ, ಸಂತ ವಿನ್ಸೆಂಟ್‌ ಪಾವ್ಲ್ ಸಭೆಯ ಅಧ್ಯಕ್ಷ ಜೋನ್‌ ಪಾಯಸ್‌, ಕಾರ್ಯದರ್ಶಿ ಪ್ಯಾಟ್ರಿಕ್‌ ಡಿ’ ಸೋಜಾ, ಕೋಶಾಧಿಕಾರಿ ಗಿಲ್ಬರ್ಟ್‌ ಡಿ’ ಸೋಜಾ, ಹಿರಿಯರಾದ ಭಗಿನಿ ಐರಿನ್‌ ಒಲವಿನ ಹಳ್ಳಿ ಹಾಗೂ ಎಲಿಯಾಸ್‌ ಕುಟಿನ್ಹಾ ಉಪಸ್ಥಿತರಿದ್ದರು.

Advertisement

ಎಸ್‌ವಿಪಿ ಅಧ್ಯಕ್ಷ ನೋಜ್‌ ಪಾಯಸ್‌ ಸ್ವಾಗತಿಸಿ, ಪ್ಯಾಟ್ರಿಕ್‌ ಡಿ’ಸೋಜಾ ವಂದಿಸಿದರು. ಚರ್ಚ್‌ ಪಾಲನಾ ಮಂಡಳಿಯ ಮಾಜಿ ಅಧ್ಯಕ್ಷ ಪ್ರಾಂಕ್ಲಿ ಫ್ರಾನ್ಸಿಸ್‌ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next