Advertisement
ಹೀಗಾಗಿ, “ಕೊರೊನಾ ಚಿಕಿತ್ಸೆ ಎಲ್ಲರಿಗೂ ಉಚಿತ’ ಎಂಬ ನಿಯಮ ಈ ಬಾರಿ ಅನ್ವಯವಾಗುವುದಿಲ್ಲ. ಕೊರೊನಾ ಪಾಸಿಟಿವ್ ಬಂದು ರೋಗ ಲಕ್ಷಣ ಇರುವ/ಇಲ್ಲದಿರುವವರು ಖಾಸಗಿ ಆಸ್ಪತ್ರೆಯ ಸಾಮಾನ್ಯ ಬೆಡ್‌ನಲ್ಲಿ ದಾಖಲಾಗುವ ಬಿಪಿಎಲ್-ಎಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ನಿಯಮ ಈ ಬಾರಿ ಇರುವುದಿಲ್ಲ.
ಆಯುಷ್ಮಾನ್ ಭಾರತ್ ಯೋಜನೆಯಡಿ ನಗರದ 20 ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ನವರಿಗೆ ಕೋವಿಡೇತರ ವಿಶೇಷ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಅಲ್ಲಿ ಈ ಯೋಜನೆಯಡಿ ಕಳೆದ ವರ್ಷ ಕೊರೊನಾ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ಇದೀಗ “ಆಟೋ ಎಂಪಾನೆಲ್ಡ್’ ವ್ಯವಸ್ಥೆಯಡಿ ಜಿಲ್ಲೆಯ ಇತರ 60 ಖಾಸಗಿ ಆಸ್ಪತ್ರೆಗಳನ್ನೂ ಕೋವಿಡ್ ಚಿಕಿತ್ಸೆಗೆ ಈ ಯೋಜನೆಯಡಿ ಒಳಪಡಿಸಲಾಗಿದೆ ಎಂದು ಆಯುಷ್ಮಾನ್ ಇಲಾಖೆ ಮೂಲಗಳು ತಿಳಿಸಿವೆ.
Related Articles
Advertisement
ಐಸಿಯು ವೆಂಟಿಲೇಟರ್‌ನಲ್ಲಿರುವವರಿಗೆ ಯೋಜನೆ
ದ.ಕ. ಜಿಲ್ಲೆಯ 80 ಆಸ್ಪತ್ರೆಗಳಲ್ಲಿ ಬಿಪಿಎಲ್-ಎಪಿಎಲ್ ಸಂಬಂಧಿತ ಕೊರೊನಾ ರೋಗಿಯು ಐಸಿಯು ಅಥವಾ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮಾತ್ರ ಅವರಿಗೆ ಆಯುಷ್ಮಾನ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕೊರೊನಾ ಪಾಸಿಟಿವ್ ಆದರೂ ರೋಗ ಲಕ್ಷಣವಿಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಕಳೆದ ಬಾರಿ ಮಾತ್ರ ಎಲ್ಲರಿಗೂ ಉಚಿತ ಚಿಕಿತ್ಸೆ ಯೋಜನೆಯಿತ್ತು. ಖಾಸಗಿ ಆಸ್ಪತ್ರೆಗಳಲ್ಲಿರುವ ಆರೋಗ್ಯ ಮಿತ್ರರಿಂದ ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂ ಧಿಸಿ ಮಾಹಿತಿಯನ್ನು ಪಡೆಯಬಹುದು.
-ಡಾ| ರತ್ನಾಕರ್, ನೋಡಲ್ ಅಧಿಕಾರಿ, ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ, ದ.ಕ.