Advertisement

Ameen Sayani: ‘ಗೀತಮಾಲಾ’ ಖ್ಯಾತಿಯ ಹಿರಿಯ ರೇಡಿಯೊ ನಿರೂಪಕ ಅಮೀನ್ ಸಯಾನಿ ನಿಧನ

11:55 AM Feb 21, 2024 | Team Udayavani |

ಮುಂಬಯಿ: ಆಕಾಶವಾಣಿ ಲೋಕದ ಧ್ವನಿ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಹಿರಿಯ ರೇಡಿಯೋ ನಿರೂಪಕ ಅಮೀನ್ ಸಯಾನಿ ವಿಧಿವಶರಾಗಿದ್ದಾರೆ. ಅವರು ತಮ್ಮ 91 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರ ನಿಧನದ ಸುದ್ದಿಯನ್ನು ಅವರ ಪುತ್ರ ರಜಿಲ್ ಸಯಾನಿ ಖಚಿತಪಡಿಸಿದ್ದಾರೆ.

Advertisement

ಹೃದಯಾಘಾತದಿಂದ ನಿಧನ:
ಅಮೀನ್ ಸಯಾನಿ ಅವರ ಪುತ್ರ ರಜಿಲ್ ಸಯಾನಿ ಅವರು ತಂದೆಯ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದು ಅವರು ತಮ್ಮ ತಂದೆಯ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ರಜಿಲ್ ಸಾಯನಿ ಹಿಂದಿನ ದಿನ ತಂದೆಯವರಿಗೆ ಹೃದಯಾಘಾತವಾಗಿತ್ತು, ನಂತರ ಅವರನ್ನು ತಕ್ಷಣ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಸ್ಪತ್ರೆ ಮಾರ್ಗ ಮಧ್ಯೆ ನಿಧನ ಹೊಂದಿದರು ಎಂದು ಹೇಳಿದ್ದಾರೆ.

ನಾಳೆ ಅಂತ್ಯಕ್ರಿಯೆ:
ಅಮೀನ್ ಸಯಾನಿ ಅವರ ಅಂತ್ಯಕ್ರಿಯೆ ನಾಳೆ ಅಂದರೆ ಫೆಬ್ರವರಿ 22 ರಂದು ನಡೆಯಲಿದೆ, ಏಕೆಂದರೆ ಇಂದು ಅವರ ಕೆಲವು ಸಂಬಂಧಿಕರು ಅಂತಿಮ ನಮನ ಸಲ್ಲಿಸಲು ಮುಂಬೈಗೆ ಬರಲಿದ್ದಾರೆ. ಅಮಿನ್ ಸಯಾನಿ ಅವರ ಅಂತಿಮ ದರ್ಶನದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಹೇಳಿಕೆಯನ್ನು ನೀಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ರೋಡಿಯೊ ಪ್ರಪಂಚದ ರಾಜ:
ಅಮೀನ್ ಸಯಾನಿ 21 ಡಿಸೆಂಬರ್ 1932 ರಂದು ಮುಂಬೈನಲ್ಲಿ ಜನಿಸಿದರು. ಅಮೀನ್ ಸಯಾನಿ ಆಕಾಶವಾಣಿ ಲೋಕದಲ್ಲಿ ದೊಡ್ಡ ಹೆಸರು ಗಳಿಸಿದರು. ಅವರ ಧ್ವನಿಯ ಮಾಂತ್ರಿಕತೆ ಜನರ ಹೃದಯದಲ್ಲಿ ನೆಲೆಸಿದೆ. ಅಮೀನ್ ಸಯಾನಿ ಮುಂಬೈನ ಆಲ್ ಇಂಡಿಯಾ ರೇಡಿಯೊದಿಂದ ರೇಡಿಯೊ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 10 ವರ್ಷಗಳ ಕಾಲ ಇಲ್ಲಿ ಇಂಗ್ಲಿಷ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದಾದ ನಂತರ ಭಾರತದಲ್ಲಿ ಆಲ್ ಇಂಡಿಯಾ ರೇಡಿಯೋವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

1952 ರಲ್ಲಿ ನಡೆಸುತ್ತಿದ್ದ ‘ಬಿನಾಕಾ ಗೀತಮಾಲಾ’ ಕಾರ್ಯಕ್ರಮ ಸುಮಾರು ನಾಲ್ಕು ದಶಕಗಳ ಕಾಲ ಮುಂದುವರೆದಿದ್ದು ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು.

ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಯಾನಿ:
ಭೂತ್ ಬಾಂಗ್ಲಾ, ತೀನ್ ದೇವಿಯಾನ್, ಬಾಕ್ಸರ್ ಮತ್ತು ಕಾಟ್ಲ್‌ನಂತಹ ಚಲನಚಿತ್ರಗಳನ್ನು ಒಳಗೊಂಡಂತೆ ಸಯಾನಿ ಅನೇಕ ಚಿತ್ರಗಳಲ್ಲಿ ರೇಡಿಯೋ ಉದ್ಘೋಷಕರಾಗಿ ಕಾಣಿಸಿಕೊಂಡರು.

ರೇಡಿಯೊ ಜಗತ್ತಿನಲ್ಲಿ ಅಮೀನ್ ಸಯಾನಿ ಅವರ ಕೊಡುಗೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು ಅದರಲ್ಲಿ:
– ಲಿವಿಂಗ್ ಲೆಜೆಂಡ್ ಪ್ರಶಸ್ತಿ (2006)
– ಚಿನ್ನದ ಪದಕ (1991) – ಇಂಡಿಯನ್ ಸೊಸೈಟಿ ಆಫ್ ಅಡ್ವರ್ಟೈಸ್‌ಮೆಂಟ್‌ನಿಂದ
– ವರ್ಷದ ವ್ಯಕ್ತಿ ಪ್ರಶಸ್ತಿ (1992) – ಲಿಮ್ಕಾ ಬುಕ್ಸ್ ಆಫ್ ರೆಕಾರ್ಡ್ಸ್
– ಕಾನ್ ಹಾಲ್ ಆಫ್ ಫೇಮ್ ಪ್ರಶಸ್ತಿ (2003) – ರೇಡಿಯೋ ಮಿರ್ಚಿಯಿಂದ

ಇದನ್ನೂ ಓದಿ: Dadasaheb Phalke IFF Awards: ಅತ್ಯುತ್ತಮ ನಟ,ನಟಿ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next