Advertisement

ಪುದುಚೆರಿಯ ಪ್ರಸಿದ್ಧ ಹಡಗುಕಟ್ಟೆ ಭಾಗಶಃ ಕುಸಿತ

12:21 AM Mar 07, 2022 | Team Udayavani |

ಪುದುಚೇರಿ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಪುದುಚೇರಿಯ ಪ್ರಖ್ಯಾತ ರಾಕ್‌ ಬೀಚ್‌ನಲ್ಲಿನ ಹಡಗುಕಟ್ಟೆ, ಭಾಗಶಃ ಕುಸಿದುಬಿದ್ದಿದೆ.

Advertisement

ತೀವ್ರವಾಗಿ ಅಲೆಗಳು ಬಡಿದಿದ್ದನ್ನು ತಾಳಿಕೊಳ್ಳಲಾಗದ್ದರಿಂದ ಹಡಗುಕಟ್ಟೆಗೆ ಈ ಪರಿಸ್ಥಿತಿ ಬಂದಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬಂಗಾಲ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ, ಗಂಟೆಗೆ 7 ಕಿ.ಮೀ. ವೇಗದಲ್ಲಿ ಸತತ 6 ಗಂಟೆಗಳ ಕಾಲ ಮಾರುತಗಳು ಬೀಸಿವೆ. ಇದರ ಪರಿಣಾಮವೇ ಪುದುಚೇರಿಯಲ್ಲಿನ ಹಡಗುಕಟ್ಟೆ ಕುಸಿತ. ಮುಂದೆ ಇದು ತಮಿಳುನಾಡಿನತ್ತ ಧಾವಿಸಲಿದೆ. ಸದ್ಯದಲ್ಲೇ ಇದರ ವೇಗ ತಗ್ಗುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next