ನವದೆಹಲಿ: ಖ್ಯಾತ ಹಾಗೂ ಹಿರಿಯ ಫ್ಯಾಶನ್ ಡಿಸೈನರ್ (ವಸ್ತ್ರ ವಿನ್ಯಾಸಕಾರ) ಸತ್ಯ ಪೌಲ್ (79ವರ್ಷ) ಅವರು ಗುರುವಾರ(ಜನವರಿ 07, 2021) ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಆಧ್ಯಾತ್ಮದತ್ತ ವಾಲಿದ್ದ ಫ್ಯಾಶನ್ ಡಿಸೈನರ್ ಸತ್ಯ ಅವರು ಕೊಯಂಬತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ವಯೋ ಸಹಜ ಕಾರಣದಿಂದ ಸಾವನ್ನಪ್ಪಿರುವುದಾಗಿ ಹೇಳಿದೆ.
ಸತ್ಯ ಪೌಲ್ ಅವರ ನಿಧನದ ಬಗ್ಗೆ ಧಾರ್ಮಿಕ ಗುರು, ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಅವರು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. “ಸತ್ಯ ಪೌಲ್ ಮಿತಿ ಇಲ್ಲದ ಅಗಾಧ ಉತ್ಸಾಹಿ ವ್ಯಕ್ತಿತ್ವ ಹೊಂದಿದ್ದವರು. ಅವರ ಅದ್ಭುತವಾದ ಚಿಂತನೆಯಿಂದ ಭಾರತೀಯ ಫ್ಯಾಶನ್ ಉದ್ಯಮಕ್ಕೆ ವಿಶಿಷ್ಟ ದೃಷ್ಟಿಕೋನವನ್ನು ತಂದ ಹೆಗ್ಗಳಿಕೆ ಅವರದ್ದಾಗಿದೆ. ಈ ಮೂಲಕ ಅವರಿಗೆ ಸುಂದರ, ಮೌಲ್ವಿಕ ಗೌರವದ ಸಂತಾಪ ಸೂಚಿಸುತ್ತಿರುವುದಾಗಿ ಸದ್ಗುರು ತಿಳಿಸಿದ್ದಾರೆ.
Related Articles
ಸತ್ಯ ಪೌಲ್ ಅವರು 1985ರಲ್ಲಿ ಫ್ಯಾಶನ್ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಹರ್ಯಾಣದ ಗುರ್ಗಾಂವ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದರು. ಪೌಲ್, ಪುನೀತ್ ನಂದ ಹಾಗೂ ಸಂಜಯ್ ಕಪೂರ್ ಫ್ಯಾಶನ್ ಡಿಸೈನ್ ಕಂಪನಿ ಸ್ಥಾಪಿಸಿದ್ದರು.