Advertisement

ವರ್ಲ್ಡ್ ಐಕಾನ್‌ ಶಿಪ್‌! ವಿಶ್ವದಲ್ಲಿ ಈವರೆಗೆ ನಿರ್ಮಿಸಲಾದ ಅತೀ ದೊಡ್ಡ ವಿಲಾಸಿ ನೌಕೆ

12:36 AM Jul 04, 2023 | Team Udayavani |

ವಿಶ್ವದ ಅತಿದೊಡ್ಡ ವಿಲಾಸಿ ನೌಕೆ “ಐಕಾನ್‌ ಆಫ್ ದಿ ಸೀಸ್‌’ 2024ರ ಜ.27ರಿಂದ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದ್ದು, ಮೊದಲ ಪರೀಕ್ಷಾರ್ಥ ಸಮುದ್ರಯಾನವನ್ನು ಟರ್ಕು ಮತ್ತು ಫಿನ್‌ಲ್ಯಾಂಡ್ ನ‌ಲ್ಲಿ ಯಶಸ್ವಿಯಾಗಿ ಪೂರೈಸಿದೆ. ಪೂರ್ವ ಮತ್ತು ಪಶ್ಚಿಮ ಕೆರಬಿಯನ್‌ ಸಮುದ್ರದ ಮೂಲಕ ಫ್ಲೋರಿಡಾದ ಮೈಮಿ ಕರಾವಳಿ ಯಿಂದ ಪ್ರಯಾಣ ಆರಂಭಿಸಲಿರುವ ಈ ನೌಕೆಯ ವೈಶಿಷ್ಟ್ಯಗಳ ವಿವರ ಇಂತಿದೆ..

Advertisement

ನೌಕೆಯ ಒಳಗೇನಿದೆ ?
20 ಮಹಡಿಯ ಬೃಹದಾಕರದ ಈ ನೌಕೆಯು ಪ್ರಯಾಣಿಕರಿಗೆ ಐಷಾರಾಮಿ ಪ್ರವಾಸ ಒದಗಿಸುವುದು ಮಾತ್ರವಲ್ಲದೇ, ಸರ್ವ ರೀತಿಯ ಸೌಕರ್ಯಗಳನ್ನೂ ಒದಗಿಸುತ್ತಿದೆ. ಫ್ಯಾಮಿಲಿ ಏರಿಯಾ, ವಾಟರ್‌ ಪಾರ್ಕ್‌, ಸಿಟ್ಟಿಂಗ್‌ ಏರಿಯಾ, ಆಕ್ವಾ ಥಿಯೇಟರ್‌, ಸ್ವಿಮ್‌ ಅಪ್‌ ಬಾರ್‌, ಪೂಲ್‌ ಏರಿಯಾದ ಜತೆಗೆ ನೌಕೆಯ ಒಳಗಿನಿಂದಲೇ ಸಮುದ್ರದ ಸೌಂದರ್ಯ ಸವಿಯಲು ಅವಕಾಶ ನೀಡುವ 220 ಡಿಗ್ರಿ ವ್ಯೂನ ಸೀಲಿಂಗ್‌ ಹಾಗೂ ವಿಂಡೋಗಳನ್ನೂ ನೌಕೆ ಹೊಂದಿದೆ. ಇನ್ನು ಪ್ರಯಾಣಿಕರ ಮನರಂಜನೆಗಾಗಿ 6 ಕ್ಯಾಟಗರಿಯ ನೀರಿನ ಜಾರುಬಂಡಿ, 7 ಈಜು ಕೊಳ ಹಾಗೂ 9 ಸುರುಳಿ ಕೊಳಗಳೂ ಕೂಡ ಇವೆ.

 

Advertisement

Udayavani is now on Telegram. Click here to join our channel and stay updated with the latest news.

Next