Advertisement

ಐಸಿಎಂಆರ್‌ನಿಂದ 54 ಸಾಮಾನ್ಯ ರೋಗಗಳ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

05:45 PM Jul 13, 2022 | Team Udayavani |

ನವದೆಹಲಿ:ಒಟ್ಟು 11 ವೈದ್ಯಕೀಯ ಶಾಖೆ(ಸ್ಪೆಷಾಲ್ಟಿ)ಗಳ 54 ಸಾಮಾನ್ಯ ಕಾಯಿಲೆಗಳಿಗೆ ವೈದ್ಯರು ನೀಡಬಹುದಾದ ಹೊಸ ಚಿಕಿತ್ಸಾ ಮಾರ್ಗಸೂಚಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಬುಧವಾರ ಬಿಡುಗಡೆ ಮಾಡಿದೆ. ಇದರ ಜೊತೆಗೆ ಮೊಬೈಲ್‌ ಆ್ಯಪ್‌ವೊಂದನ್ನೂ ಅನಾವರಣ ಮಾಡಲಾಗಿದೆ.

Advertisement

ಸಾರ್ವಜನಿಕ ಆರೋಗ್ಯಸೇವೆಯ ಎಲ್ಲ ಹಂತಗಳಲ್ಲೂ ಫಿಸೀಷಿಯನ್‌ಗಳು ಇದನ್ನು ಬಳಸಬಹುದು ಎಂದು ಐಸಿಎಂಆರ್‌ ತಿಳಿಸಿದೆ.

“ಸ್ಟಾಂಡರ್ಡ್‌ ಟ್ರೀಟ್‌ಮೆಂಟ್‌ ವರ್ಕ್‌ಫ್ಲೋಸ್‌’ನ 3ನೇ ಸಂಪುಟದಲ್ಲಿ ಔಷಧಗಳ ಅನಿಯಮಿತ ಬಳಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಂಶಗಳಿವೆ. ಚರ್ಮರೋಗ, ಅಂತಃಸ್ರಾವ ಶಾಸ್ತ್ರ, ಗ್ಯಾಸ್ಟ್ರೋ ಎಂಟರಾಲಜಿ, ಜನರಲ್‌ ಸರ್ಜರಿ, ನವಜಾತಶಾಸ್ತ್ರ, ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ ಸೇರಿದಂತೆ 11 ಶಾಖೆಗಳಿಗೆ ಸಂಬಂಧಿಸಿದ 54 ಕಾಯಿಲೆಗಳಿಗೆ ನೀಡಬಹುದಾದ ಚಿಕಿತ್ಸಾ ವಿಧಾನಗಳು ಇದರಲ್ಲಿವೆ.

2019ರಲ್ಲಿ ಐಸಿಎಂಆರ್‌ 53 ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಮಾರ್ಗಸೂಚಿಯುಳ್ಳ ಮೊದಲ ಸಂಪುಟವನ್ನು, ಪ್ರಸಕ್ತ ವರ್ಷದ ಮಾರ್ಚ್‌ ತಿಂಗಳಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದ 18 ಕಾಯಿಲೆಗಳಿಗೆ ಚಿಕಿತ್ಸಾ ಮಾರ್ಗಸೂಚಿಯುಳ್ಳ 2ನೇ ಸಂಪುಟವನ್ನು ಬಿಡುಗಡೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next