Advertisement

ICICI: ನಿವ್ವಳ ಲಾಭ ಶೇ.36 ಏರಿಕೆ

09:17 PM Oct 21, 2023 | Team Udayavani |

2023-24ನೇ ಆರ್ಥಿಕ ವರ್ಷದ ಸಾಲಿನ ದ್ವಿತೀಯ ತ್ತೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್‌ನ ನಿವ್ವಳ ಲಾಭವು ಶೇ.36.08 ರಷ್ಟು ಏರಿಕೆಯಾಗುವ ಮೂಲಕ 10,896.13 ಕೋಟಿ ರೂ.ಗಳಿಗೆ ತಲುಪಿದೆ. ಪ್ರಮುಖ ಆದಾಯಗಳ ಬೆಳವಣಿಗೆ ಹಾಗೂ ನಿಬಂಧನೆಗಳ ಸಡಿಲಿಕೆಯಿಂದ ನಿವ್ವಳ ಲಾಭ ಹೆಚ್ಚಳವಾಗಿದೆ ಎಂದು ಸಂಸ್ಥೆ ತಿಳಿಸಿದೆ.

Advertisement

ಇನ್ನು ಸಂಸ್ಥೆಯ ಆದಾಯ ಕೂಡ ಹೆಚ್ಚಳವಾಗಿ 40,697 ಕೋಟಿ ರೂ.ಗಳಿಗೆ ತಲುಪಿದ್ದು, ಕಳೆದ ವರ್ಷ 2ನೇ ತ್ತೈಮಾಸಿಕದಲ್ಲಿ ಈ ಮೊತ್ತ 31,088 ಕೋಟಿ ರೂ.ಗಳಾಗಿತ್ತು. ಇನ್ನು ಸಂಸ್ಥೆಯ ನಿವ್ವಳ ಬಡ್ಡಿ ಆದಾಯ ಕೂಡ ಶೇ. 23.8ರಷ್ಟು ಏರಿಕೆಯೊಂದಿಗೆ 18, 308 ಕೋಟಿ ರೂ.ಗಳಿಗೆ ತಲುಪಿದೆ.

 

Advertisement

Udayavani is now on Telegram. Click here to join our channel and stay updated with the latest news.

Next