ನವ ದೆಹಲಿ : ತಿಂಗಳ ಆರಂಭದಿಂದ ಅಂದರೇ ಜುಲೈ 1 ರಿಂದ ಕೆಲವು ಬ್ಯಾಂಕಿಂಗ್ ವಹಿವಾಟಿನಲ್ಲಿ ಬದಲಾವಣೆಗಳು ಆಗಿವೆ. ಆದರೇ, ಕೆಲವು ಬ್ಯಾಂಕ್ ಗಳು ಈ ಬದಲಾವಣೆಯನ್ನು ಮುಂದೂಡಿವೆ. ಆ ಬ್ಯಾಮಕ್ ಗಳ ಪೈಕಿ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಕೂಡ ಒಂದು.
ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಪ್ರಮುಖ ಸುದ್ದಿಯೊಂದನ್ನು ನೀಡಿದೆ. ನಗದು ವಹಿವಾಟು, ಎಟಿಎಂ ಇಂಟರ್ ಚಾರ್ಜ್ ಮತ್ತು ಚೆಕ್ ಬುಕ್ ಶುಲ್ಕದ ದರವನ್ನು ಬ್ಯಾಂಕ್ ಪರಿಷ್ಕರಿಸಲಿದೆ ಎಂದು ಮಾಹಿತಿ ನೀಡಿದೆ.
ಪರಿಷ್ಕೃತ ಶುಲ್ಕಗಳು ಆಗಸ್ಟ್ 1, 2021 ರಿಂದ ಅನ್ವಯವಾಗುತ್ತವೆ. ನಗದು ವಹಿವಾಟು ಶುಲ್ಕದ ಮಿತಿಯಲ್ಲಿನ ಬದಲಾವಣೆಯು ಖಾತೆಯ ಪ್ರಕಾರಕ್ಕೆ ಅನುಗುಣವಾಗಿರುತ್ತದೆ. ಹಾಗಾದರೆ ನಿಮ್ಮ ಖಾತೆಯಲ್ಲಿ ಯಾವ ಸೇವೆಗೆ ಎಷ್ಟು ಶುಲ್ಕ ವಿಧಿಸಲಾಗುವುದು ಎಂದು ಐಸಿಐಸಿಐ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ಮೂಲಕ ತಿಳಿಸಿದೆ.
ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 4992 ಸೋಂಕಿತರು ಗುಣಮುಖ; 3104 ಹೊಸ ಪ್ರಕರಣ ಪತ್ತೆ
ಇನ್ನು, ಪ್ರಸ್ತುತ, ಐಸಿಐಸಿಐ ಬ್ಯಾಂಕ್ ಖಾತೆದಾರರು ಒಂದು ವರ್ಷದಲ್ಲಿ 20 ಚೆಕ್ ಲೀವ್ಸ್ ಹೊಂದಿರುವ ಚೆಕ್ ಬುಕ್ ನನ್ನು ಉಚಿತವಾಗಿ ಪಡೆಯುತ್ತಿದ್ದರು. ಅದರ ನಂತರ ಹೆಚ್ಚಿನ ಚೆಕ್ ಲೀವ್ಸ್ ಅಗತ್ಯವಿದ್ದರೆ, ಗ್ರಾಹಕರು 10 ಲೀವ್ಸ್ ಗಳನ್ನು ಹೊಂದಿರುವ ಚೆಕ್ ಬುಕ್ ಗಾಗಿ 20 ರೂ. ಪಾವತಿಸಬೇಕಾಗಿತ್ತು. ಆದರೆ ಈಗ ಒಂದು ವರ್ಷದಲ್ಲಿ 25 ಚೆಕ್ ಲೀವ್ಸ್ ಗಳೊಂದಿಗೆ ಉಚಿತ ಚೆಕ್ ಬುಕ್ ಪಡೆಯಬಹುದಾಗಿದೆ. ಅದರ ನಂತರ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅಂದರೆ, 10 ಚೆಕ್ ಲೀವ್ಸ್ ಪಡೆಯಲು 20 ರೂಪಾಯಿ ಪಾವತಿಸಬೇಕಾಗುತ್ತದೆ.
ಎಟಿಎಂ ಇಂಟರ್ ಚಾರ್ಜ್ ಶುಲ್ಕಗಳು (ಐಸಿಐಸಿಐ ಅಲ್ಲದ ಬ್ಯಾಂಕ್ ಎಟಿಎಂಗಳಿಂದ ಹಣ ವರ್ಗಾವಣೆ ಅಥವಾ ಹಿಂಪಡೆದರೆ ) :
- , ಒಂದು ತಿಂಗಳಲ್ಲಿ 6 ಮೆಟ್ರೋ ನಗರಗಳಲ್ಲಿ (ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಬೆಂಗಳೂರು ಮತ್ತು ಹೈದರಾಬಾದ್) ನೀವು ಯಾವುದೇ ಐಸಿಐಸಿಐ ಅಲ್ಲದ ಬ್ಯಾಂಕ್ ಎಟಿಎಂ ನಿಂದ ಹಣವನ್ನು ಹಿಂಪಡೆದುಕೊಂಡರೆ, ಮೊದಲ ಮೂರು ವಹಿವಾಟುಗಳು ಉಚಿತವಾಗಿರುತ್ತದೆ. ಇದು ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಕೂಡ ಒಳಗೊಂಡಿರುತ್ತದೆ.
- ಮೆಟ್ರೋ ನಗರಗಳನ್ನು ಹೊರತಾಗಿ ಉಳಿದೆಡೆ, ಒಂದು ತಿಂಗಳಲ್ಲಿ ಮೊದಲ 5 ವಹಿವಾಟುಗಳು ಉಚಿತವಾಗಿರಲಿದ್ದು, ಅದರ ನಂತರ, ಯಾವುದೇ ಹಣಕಾಸಿನ ವಹಿವಾಟಿಗೆ 20 ರೂ, ಮತ್ತು ಯಾವುದೇ ಹಣಕಾಸಿನೇತರ ವಹಿವಾಟು 8.5 ರೂ. ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ : ಕೋವಿಡ್ ಸೋಂಕು ಹೆಚ್ಚಳ: ಮಹಾರಾಷ್ಟ್ರ ಸತಾರಾ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ