Advertisement
ನೀರಿಂಗಿಸುವಿಕೆಅಂದಹಾಗೆ ನೀರಿಂಗಿಸುವ ಮೂಲಕ ಸಮಸ್ಯೆ ನಿವಾರಿಸಿಕೊಂಡದ್ದು ಬೆಳ್ವೆ ಶಂಕರನಾರಾಯಣ ದೇವಸ್ಥಾನ ಬಳಿಯ ನಿವಾಸಿ, ಬೆಳ್ವೆ ಗ್ರಾ.ಪಂ. ಸದಸ್ಯ ಕೃಷ್ಣ ನಾಯ್ಕ. ತಾರಸಿ ಮನೆ, ತೋಟ, ಗದ್ದೆ ಎಂದು ಹೊಂದಿರುವ ಕೃಷ್ಣ ನಾಯ್ಕ ಅವರಿಗೆ ನೀರಿಗೆ ಸಮಸ್ಯೆಯಿತ್ತು. ಕೃಷಿಗೆ ನೀರು ಸಾಲುತ್ತಿರಲಿಲ್ಲ.
Related Articles
1450 ಚ.ಅಡಿ ಮನೆಯ ತಾರಸಿಯಲ್ಲಿ ಹೇರಳ ನೀರು ಸಂಗ್ರಹವಾಗುತ್ತಿತ್ತು. ಅದಕ್ಕಾಗಿ ಕೃಷ್ಣ ಅವರು 2.5 ಇಂಚು ಗಾತ್ರದ ಪೈಪುಗಳನ್ನು ಆಯ್ದುಕೊಂಡರು. ಇಳಿಬಿಟ್ಟ ಮಾಡಿನ ನೀರು ಸಂಗ್ರಹವಾಗಲು 45 ಅಡಿ ಉದ್ದನೆಯ ತಗಡಿನ ಹರಣಿ (ಅರ್ಧ ಚಂದ್ರಾಕೃತಿಯ ಪೈಪ್, ತುಳುವಿನ ದಂಬೆ) ಇಟ್ಟರು. ಸಾಮಾನ್ಯವಾಗಿ ಪಿವಿಸಿಯ ಹರಣಿ ದೊರೆಯುತ್ತದೆ. ಆದರೆ ದೊಡ್ಡ ಪ್ರಮಾಣ, ಆಕಾರದಲ್ಲಿ ದೊರೆಯುವುದಿಲ್ಲ. ತಾರಸಿಯಿಂದ ನೀರು ಸೋಸುವ ವಿವಿಧ ಫಿಲ್ಟರ್‌ಗಳನ್ನು ಅಳವಡಿಸಿದ 200 ಲೀ. ಸಾಮರ್ಥ್ಯದ ಡ್ರಮ್‌ಗೆ ನೀರು ಬಂದು ಅಲ್ಲಿಂದ 2.5 ಲೆಂತ್‌ನ ಪೈಪ್ ಮೂಲಕ ಕೆರೆಗೆ ಬರುವಂತೆ ಮಾಡಿದರು.
Advertisement
ಕೃಷಿಗೂ ಆಯಿತುಈ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಯಿತು. ಸಾಲದೆಂಬಂತೆ ಕೃಷಿಗೂ ನೀರಾಯಿತು. ಕಳೆದ ತಿಂಗಳು ಮಳೆ ಕಡಿಮೆಯಿತ್ತು. ಕೃಷಿಗೆ ಬೇಕಾದಷ್ಟು ಬರಲಿಲ್ಲ. ಆದರೆ ಬಂದ ಮಳೆ ನೀರನ್ನೇ ಉಪಯೋಗಿಸಿ ಭತ್ತ ನಾಟಿ ಮಾಡಿದರು. ನೀರಿಂಗಿಸುವ ಗುಂಡಿಯಿಂದ ಗದ್ದೆಗೆ ಹರಿಸಿ ಭತ್ತದ ಕೃಷಿಯನ್ನೂ ಇದೇ ನೀರಿಂಗಿಸುವ ತಂತ್ರಜ್ಞಾನದ ಮೂಲಕ ವರವಾಗಿಸಿದರು. ನೀರಾಯಿತು
ಎಷ್ಟು ಪರಿಣಾಮಕಾರಿಯಾಯಿತು ಈ ವ್ಯವಸ್ಥೆ ಎಂದರೆ 700 ಅಡಿ ಆಳದ ಕೊಳವೆಬಾವಿಯಲ್ಲಿ ಮುಕ್ಕಾಲು ಇಂಚು ನೀರಿದ್ದುದು ಈಗ 24 ತಾಸು ತೆಗೆದರೂ ಮುಗಿಯದಷ್ಟಾಗಿದೆ!. ಇದರ ನೀರನ್ನೇ 70 ತೆಂಗಿನ ಮರಗಳು, 2 ಎಕರೆ ಭತ್ತದ ಗದ್ದೆ, 200 ಅಡಿಕೆ ಮರಗಳಿಗೆ ಉಪಯೋಗಿಸುವಷ್ಟು ನೀರು ಸಂಗ್ರಹವಾಗುತ್ತಿದೆ. 10 ನಿಮಿಷ ಪಂಪು ಚಾಲೂ ಮಾಡಿದರೆ ಸಾವಿರ ಲೀ.ನ ಸಿಂಟೆಕ್ಸ್ 10 ನಿಮಿಷದೊಳಗೆ ತುಂಬುತ್ತದೆ ಎನ್ನುತ್ತಾರೆ ಕೃಷ್ಣ ನಾಯ್ಕ ಅವರು. ಆಗಸ್ಟ್ ಅನಂತರದ ನೀರು ಪ್ರತಿ ಹನಿಯೂ ಭೂಮಿಗೆ ಇಂಗುವಂತಾಗಿದೆ. ಇದೆಲ್ಲದರ ಪರಿಣಾಮ ಅವರು ಕೃಷಿ ಇಲಾಖೆಯಿಂದ ನೀರು ನಿರ್ವಹಣೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದರು. ಕೊಳವೆಬಾವಿಗೆ
ಕೊಳವೆಬಾವಿಗೂ ನೀರಿಂಗಿಸಲು ಮನ ಮಾಡಿದರು. ಆದರೆ ಸ್ವಲ್ಪ ವೆಚ್ಚದಾಯಕವಾಯಿತು. ಕೊಳವೆಬಾವಿಗೆ ಸಮಾನಾಂತರವಾಗಿ ಸುತ್ತ 15 ಅಡಿ ಅಗಲ, 15 ಅಡಿ ಆಳ, 15 ಅಡಿ ಉದ್ದದ ಗುಂಡಿ ತೋಡಿದರು. ಅದರಲ್ಲಿ ಕಾಲು ಇಂಚಿನ 126 ರಂಧ್ರಗಳನ್ನು ಕೊರೆದರು. ಅದಕ್ಕೆ ಕಬ್ಬಿಣದ ಬಲೆ ಹಾಕಿದರು. ಗುಂಡಿಯ ಬುಡದಲ್ಲಿ 2 ಅಡಿ ಎತ್ತರಕ್ಕೆ ದೊಡ್ಡ ಬೋಡ್ರಸ್ (ಕಲ್ಲು), ನಂತರ 6 ಮಿ.ಮೀ. ಗಾತ್ರದ ಬೋಡ್ರಸ್ ಅನ್ನು 1 ಅಡಿ ಎತ್ತರಕ್ಕೆ ಹಾಕಿದರು. ಅದರ ಮೇಲೆ 2 ಅಡಿ ಎತ್ತರಕ್ಕೆ ಕಚ್ಚಾ ಮರಳು ಹಾಕಿದರು. ಬಳಿಕ ಕಬ್ಬಿಣದ ಬಲೆ ಹಾಕಲಾಯಿತು. ಅದರ ಮೇಲೆ ಇದ್ದಿಲು ಸುರಿದರು. ಅನಂತರ ಪುನಃ ಬಲೆ ಹಾಕಲಾಯಿತು. ಅದರ ಮೇಲೆ ಕಸರಹಿತವಾದ ಗಾಳಿಸಿದ ಮರಳನ್ನು ಹಾಕಲಾಯಿತು. ಇದಕ್ಕೆ ತಾರಸಿ ನೀರು ಬಿದ್ದು ಇಂಗುವ ವ್ಯವಸ್ಥೆ ಮಾಡಲಾಗಿದೆ. ಸರಕಾರದ
ಪ್ರೋತ್ಸಾಹ ಬೇಕು
ಅಮಾಸೆಬೈಲು ಪಂಚಾಯತ್‌ನಲ್ಲಿ ನೀರಿಂಗಿಸಲು ಪ್ರೋತ್ಸಾಹಧನ ಕೊಟ್ಟಂತೆ ಎಲ್ಲ ಪಂಚಾಯತ್‌ಗಳಲ್ಲೂ ನೀಡುವಂತಾಗಬೇಕು. ಸರಕಾರ ಮಳೆ ನೀರಿಂಗಿಸಲು ಪ್ರೋತ್ಸಾಹ ಕೊಡಬೇಕು. ಈ ನಿಟ್ಟಿನಲ್ಲಿ ಉದಯವಾಣಿ ಮಾಡು ತ್ತಿರುವ ಅಭಿಯಾನ ಶ್ಲಾಘನೀಯ.
-ಕೃಷ್ಣ ನಾಯ್ಕ ಬೆಳ್ವೆ,
ಪ್ರಗತಿಪರ ಕೃಷಿಕರು ನೀವೂ ಅಳವಡಿಸಿ,
ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವ ರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529