Advertisement

ಫಿಕ್ಸಿಂಗ್‌: ಲಂಕಾ ತಂಡದ ವಿರುದ್ಧ  ಐಸಿಸಿ ತನಿಖೆ

12:02 PM Sep 25, 2017 | Team Udayavani |

ಕೊಲಂಬೊ: ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಶ್ರೀಲಂಕಾ ತಂಡ ತವರಿನಲ್ಲಿಯೇ 2-3ರಿಂದ ಸೋಲುಂಡಿದ್ದು ಈಗ ಅನುಮಾನಕ್ಕೆ ಕಾರಣವಾಗಿದೆ. ಇದು ಮ್ಯಾಚ್‌ ಫಿಕ್ಸಿಂಗ್‌ ಆಗಿರುವ ಸಾಧ್ಯತೆ ಇದ್ದು, ಇದನ್ನು ತನಿಖೆ ಮಾಡಿ ಎಂದು ಲಂಕಾದ ಮಾಜಿ ವೇಗಿ ಪ್ರಮೋದಯ ವಿಕ್ರಮಸಿಂಘೆ ನೇತೃತ್ವದಲ್ಲಿ  40 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಗೆ (ಐಸಿಸಿ) ಪತ್ರ ಬರೆದಿದ್ದಾರೆ. 

Advertisement

ಇದನ್ನು ಪರಿಗಣಿಸಿರುವ ಐಸಿಸಿ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಐಸಿಸಿ ಪ್ರಧಾನ ಕಾರ್ಯದರ್ಶಿ ಅಲೆಕ್ಸ್‌ ಮಾರ್ಷಲ್‌, “ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ಕ್ರಿಕೆಟ್‌ನ ಘನತೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದೆ. ಸದ್ಯ ಶ್ರೀಲಂಕಾ ತಂಡದ ವಿರುದ್ಧ ತನಿಖೆ ಆರಂಭವಾಗಿದೆ. ಈ ಬಗ್ಗೆ ನಾವು ಹಲವಾರು ಜನರೊಂದಿಗೆ ಮಾತನಾಡಿದ್ದೇವೆ’ ಎಂದು ತಿಳಿಸಿದ್ದಾರೆ.  ಇತ್ತೀಚೆಗೆ ಶ್ರೀಲಂಕಾ ತವರಿನಲ್ಲೇ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಭಾರೀ ಟೀಕೆಗೊಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next