Advertisement
ಭಾರತ ಈ ವರೆಗಿನ ಗೆಲುವಿನಿಂದ 360 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದ್ದರೂ ಇಲ್ಲೀಗ “ವಿನ್ ಪರ್ಸಂಟೇಜ್ ಪಾಯಿಂಟ್ಸ್’ ನಿರ್ಣಾಯಕವಾಗಲಿದೆ. ಭಾರತವಿಲ್ಲಿ ದ್ವಿತೀಯ ಸ್ಥಾನದಲ್ಲಿದೆ (0.750). ಆಸ್ಟ್ರೇಲಿಯ 296 ಅಂಕಗಳನ್ನಷ್ಟೇ ಪಡೆದಿದ್ದರೂ ಅದರ ಗೆಲುವಿನ ಪ್ರತಿಶತ ಅಂಕ 0.822 ಆಗಿದ್ದು, ಅಗ್ರಸ್ಥಾನ ಅಲಂಕರಿಸಿದೆ.
ಅಗ್ರ ಎರಡು ತಂಡಗಳು ಮುಂದಿನ ವರ್ಷ ಲಾರ್ಡ್ಸ್‌ನಲ್ಲಿ ಫೈನಲ್‌ನಲ್ಲಿ ಸೆಣಸಲಿವೆ. ಭಾರತ ಇಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲುವಿನ ಫಲಿತಾಂಶ ದಾಖಲಿಸಬೇಕಾದ ಅಗತ್ಯವಿದೆ. ಬಳಿಕ ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಸರಣಿ ಆಡಲಿದೆ. ಈ 8 ಟೆಸ್ಟ್‌ಗಳಲ್ಲಿ ಭಾರತ 5 ಗೆಲುವು ಒಲಿಸಿಕೊಳ್ಳಬೇಕು ಅಥವಾ 4 ಗೆಲುವು-3 ಡ್ರಾ ಸಾಧಿಸಬೇಕಾದುದು ಅನಿವಾರ್ಯ. ಇನ್ನೊಂದೆಡೆ ನ್ಯೂಜಿಲ್ಯಾಂಡ್ ವರ್ಷಾಂತ್ಯ ಪ್ರವಾಸಿ ಪಾಕಿಸ್ಥಾನ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದು, ಅಕಸ್ಮಾತ್ ಇದನ್ನೂ 2-0 ಅಂತರದಿಂದ ಗೆದ್ದರೆ ಇನ್ನಷ್ಟು ಮೇಲೇರಲಿದೆ. ಭಾರತ ವಿರುದ್ಧ ಆಸ್ಟ್ರೇಲಿಯ ಎಡವಿದರೆ ಆಗ ಅದು ಮೂರಕ್ಕೆ ಕುಸಿಯುವ ಸಾಧ್ಯತೆ ಇದೆ.