ಆಗಸ್ಟ್ 19ಕ್ಕೆ ಅನ್ವಯಿಸಿ ಹೇಳುವುದಾದರೆ, ಪ್ರಸಕ್ತ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯ ಲ್ಲಿನ್ನೂ 14 ಸರಣಿಗಳು ಬಾಕಿ ಉಳಿದಿವೆ. 9 ತಂಡಗಳೂ ಸೆಣಸಾಡಲಿಕ್ಕಿದೆ.
Advertisement
ನಿನ್ನೆಯಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ 5ನೇ ಸ್ಥಾನದಿಂದ ಮೇಲೆದ್ದಿಲ್ಲ. ಅದರ ಗೆಲುವಿನ ಪ್ರತಿಶತ ಸಾಧನೆ (ಪಿಸಿಟಿ) 38.89 ಮಾತ್ರ. ವೆಸ್ಟ್ ಇಂಡೀಸ್ 18.52 ಪಿಸಿಟಿಯೊಂದಿಗೆ ಕೊನೆಯ ಸ್ಥಾನಿಯಾಗಿದೆ.
ಪ್ರಸ್ತುತ ಭಾರತ ತಂಡ ಅಗ್ರಸ್ಥಾನಿಯಾಗಿದೆ. 9 ಟೆಸ್ಟ್‌ಗಳಲ್ಲಿ ಆರನ್ನು ಗೆದ್ದಿರುವ ಭಾರತ, ಎರಡನ್ನು ಸೋತಿದೆ. ಪಿಸಿಟಿ 68.52. ಆಸ್ಟ್ರೇಲಿಯಕ್ಕೆ ದ್ವಿತೀಯ ಸ್ಥಾನ (62.50). ಅದು 12ರಲ್ಲಿ ಎಂಟನ್ನು ಗೆದ್ದಿದೆ; ಮೂರನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್ 3ನೇ, ಶ್ರೀಲಂಕಾ 4ನೇ ಸ್ಥಾನದಲ್ಲಿವೆ (50.00). ಅನಂತರದ ಸ್ಥಾನದಲ್ಲಿರುವ ತಂಡಗಳೆಂದರೆ ದಕ್ಷಿಣ ಆಫ್ರಿಕಾ (38.89), ಪಾಕಿಸ್ಥಾನ (36.66), ಇಂಗ್ಲೆಂಡ್ (36.54) ಮತ್ತು ಬಾಂಗ್ಲಾದೇಶ (25.00). ಭಾರತವಿನ್ನು ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, ನ್ಯೂಜಿಲ್ಯಾಂಡ್ ವಿರುದ್ಧ 3 ಟೆಸ್ಟ್, ಆಸ್ಟ್ರೇಲಿಯ ವಿರುದ್ಧ 5 ಟೆಸ್ಟ್ ಆಡಲಿಕ್ಕಿದೆ. ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ತವರಿನಲ್ಲಿ ಆಡುವುದರಿಂದ ಮೇಲುಗೈ ನಿರೀಕ್ಷಿಸಲಡ್ಡಿ ಯಿಲ್ಲ. ಆಗ ಭಾರತದ ಅಗ್ರಸ್ಥಾನಕ್ಕೇನೂ ಧಕ್ಕೆ ಆಗದು. ಆದರೆ ಬೋರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 5 ಪಂದ್ಯಗಳು ಆಸ್ಟ್ರೇಲಿಯದಲ್ಲಿ ನಡೆಯಲಿರುವುದರಿಂದ ಇಲ್ಲಿ ಕಠಿನ ಸವಾಲು ಎದುರಾಗುವ ನಿರೀಕ್ಷೆ ಇದೆ. ಈ ಆವೃತ್ತಿಯಲ್ಲಿ ಆಸ್ಟ್ರೇಲಿಯಕ್ಕೆ ಬೇರೆ ಯಾವುದೇ ಟೆಸ್ಟ್ ಸರಣಿಗಳಿಲ್ಲ.
Related Articles
ತಂಡ ಪಿಸಿಟಿ
1. ಭಾರತ 68.52
2. ಆಸ್ಟ್ರೇಲಿಯ 62.50
3. ನ್ಯೂಜಿಲ್ಯಾಂಡ್ 50.00
4. ಶ್ರೀಲಂಕಾ 50.00
5. ದ.ಆಫ್ರಿಕಾ 38.89
6. ಪಾಕಿಸ್ಥಾನ 36.66
7. ಇಂಗ್ಲೆಂಡ್ 36.54
8. ಬಾಂಗ್ಲಾ 25.00
9. ವಿಂಡೀಸ್ 18.52
Advertisement