ಹರಾರೆ: ಶನಿವಾರದ ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ನೇಪಾಲವನ್ನು 7 ವಿಕೆಟ್‌ಗಳಿಂದ ಕೆಡವಿತು. ಇದರೊಂದಿಗೆ 4 ಪಂದ್ಯಗಳಲ್ಲಿ 3ನೇ ಸೋಲನುಭವಿಸಿದ ನೇಪಾಲ ತನ್ನ ಲೀಗ್ ವ್ಯವಹಾರ ಮುಗಿಸಿತು. ಕೂಟದಿಂದಲೂ ನಿರ್ಗಮಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ನೇಪಾಲ 44.3 ಓವರ್‌ಗಳಲ್ಲಿ 167ಕ್ಕೆ ಆಲೌಟ್ ಆಯಿತು. ನೆದರ್ಲೆಂಡ್ಸ್ 27.1 ಓವರ್‌ಗಳಲ್ಲಿ 3 ವಿಕೆಟಿಗೆ 168 ರನ್ ಬಾರಿಸಿತು. ಇದು 3 ಪಂದ್ಯಗಳಲ್ಲಿ ಡಚ್ಚರ ಪಡೆಗೆ ಒಲಿದ 2ನೇ ಗೆಲುವು.
ಚೇಸಿಂಗ್ ವೇಳೆ ನೆದರ್ಲೆಂಡ್ಸ್ ಆರಂಭಕಾರ ಮ್ಯಾಕ್ಸ್ ಓ’ಡೌಡ್ 90 ರನ್ ಬಾರಿಸಿದರು. ಶತಕದ ನಿರೀಕ್ಷೆಯಲ್ಲಿದ್ದ ಓ’ಡೌಡ್ ಮಧ್ಯಮ ವೇಗಿ ಗುಲ್ಶನ್ ಝಾ ಎಸೆತವೊಂದರಲ್ಲಿ ಕ್ಲೀನ್‌ಬೌಲ್ಡ್ ಆದರು. 75 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸೇರಿತ್ತು. ಇವರ ಜತೆಗಾರ ವಿಕ್ರಮ್‌ಜಿತ್ ಸಿಂಗ್ 30 ರನ್ ಮಾಡಿದರು. ಮೊದಲ ವಿಕೆಟಿಗೆ 13 ಓವರ್‌ಗಳಿಂದ 86 ರನ್ ಹರಿದು ಬಂತು. ಬಾಸ್ ಡಿ ಲೀಡ್ 41 ರನ್ ಮಾಡಿ ಅಜೇಯರಾಗಿ ಉಳಿದರು.
ನೇಪಾಲ ಸರದಿಗೆ ಕಡಿವಾಣ ಹಾಕಿದವರು ಲೋಗನ್ ವಾನ್ ಬೀಕ್. ಇವರ ಸಾಧನೆ 24ಕ್ಕೆ 4 ವಿಕೆಟ್. ಬಾಸ್ ಡಿ ಲೀಡ್ ಮತ್ತು ವಿಕ್ರಮ್‌ಜಿತ್ ಸಿಂಗ್ ತಲಾ 2 ವಿಕೆಟ್ ಕೆಡವಿದರು.
ನೇಪಾಲ ಸರದಿಯಲ್ಲಿ 33 ರನ್ ಮಾಡಿದ ನಾಯಕ ರೋಹಿತ್ ಪೌದೆಲ್ ಅವರದೇ ಹೆಚ್ಚಿನ ಗಳಿಕೆ. ಆರಂಭಕಾರ ಕುಶಲ್ ಬುರ್ಟೆಲ್ ಮತ್ತು ಕೆಳ ಸರದಿಯ ಸಂದೀಪ್ ಲಮಿಚಾನೆ ತಲಾ 27 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ನೇಪಾಲ-44.3 ಓವರ್‌ಗಳಲ್ಲಿ 167 (ರೋಹಿತ್ ಪೌದೆಲ್ 33, ಕುಶಲ್ ಬುರ್ಟೆಲ್ 27, ಸಂದೀಪ್ ಲಮಿಚಾನೆ 27, ಲೋಗನ್ ವಾನ್ ಬೀಕ್ 24ಕ್ಕೆ 4, ವಿಕ್ರಮ್‌ಜಿತ್ ಸಿಂಗ್ 20ಕ್ಕೆ 2, ಬಾಸ್ ಡಿ ಲೀಡ್ 31ಕ್ಕೆ 2). ನೆದರ್ಲೆಂಡ್ಸ್-27.1 ಓವರ್‌ಗಳಲ್ಲಿ 3 ವಿಕೆಟಿಗೆ 168 (ಮ್ಯಾಕ್ಸ್ ಓ’ಡೌಡ್ 90, ಬಾಸ್ ಡಿ ಲೀಡ್ ಔಟಾಗದೆ 41, ವಿಕ್ರಮ್‌ಜಿತ್ ಸಿಂಗ್ 30, ಸಂದೀಪ್ ಲಮಿಚಾನೆ 60ಕ್ಕೆ 2).
ಪಂದ್ಯಶ್ರೇಷ್ಠ: ಮ್ಯಾಕ್ಸ್ ಓ’ಡೌಡ್.