Advertisement

ವನಿತಾ ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಜಯ

10:10 PM Jun 24, 2017 | Team Udayavani |

ಡರ್ಬಿ: ವನಿತಾ ವಿಶ್ವಕಪ್‌ ಕ್ರಿಕೆಟ್‌ ಆರಂಭಿಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಭಾರತ 35 ರನ್‌ಗಳಿಂದ ಜಯಗಳಿಸಿದೆ.

Advertisement

ಟಾಸ್‌ ಗೆದ್ದ ಇಂಗ್ಲೆಂಡ್‌ ಭಾರತವನ್ನೇ ಮೊದಲು ಬ್ಯಾಟಿಂಗಿಗೆ ಆಹ್ವಾನಿಸಿತು. ಆತಿಥೇಯ ಇಂಗ್ಲೆಂಡ್‌ ವಿರುದ್ಧ ಭಾರತ 281 ರನ್ನುಗಳ ಬೃಹತ್‌ ಮೊತ್ತ ಪೇರಿಸಿದರೆ ಇಂಗ್ಲೆಂಡ್‌ ತಂಡವು 47.3 ಓವರ್‌ಗಳಲ್ಲಿ 246 ರನ್ನಿಗೆ ಆಲೌಟಾಗಿ ಶರಣಾಯಿತು.

ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧನಾ-ಪೂನಂ ರಾವತ್‌ ಜೋಡಿಯ 144 ರನ್‌ ಜತೆಯಾಟ, ನಾಯಕಿ ಮಿಥಾಲಿ ರಾಜ್‌ ಅವರ ಅಮೋಘ ಆಟ ಮಹತ್ರ ಪಾತ್ರ ವಹಿಸಿತು. ಇಂಗ್ಲೆಂಡ್‌ ದಾಳಿಯನ್ನು ಪುಡಿಗುಟ್ಟತೊಡಗಿದ ಈ ಮೂವರೂ ಅರ್ಧ ಶತಕ ಬಾರಿಸಿ ಮಿಂಚಿದರು. ಪೂನಂ ಮತ್ತು ಮಂಧನಾಗೆ 2ನೇ ಏಕದಿನ ಶತಕ ಸ್ವಲ್ಪದರಲ್ಲೇ ಕೈತಪ್ಪಿದರೆ, ಮಿಥಾಲಿ ಸತತ 7ನೇ ಅರ್ಧ ಶತಕ ಬಾರಿಸಿ ತಮ್ಮ ಫಾರ್ಮ್ ಏನೆಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next