Advertisement

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್‌ ಆತಿಥ್ಯಕ್ಕೆ ಜಿಂಬಾಬ್ವೆ ಆಸಕ್ತಿ

09:01 PM Aug 17, 2024 | Team Udayavani |

ಹರಾರೆ: ಬಾಂಗ್ಲಾದಲ್ಲಿ ಭುಗಿಲೆದ್ದಿರುವ ವಿದ್ಯಾರ್ಥಿ ದಂಗೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯ ವಹಿಸಲು ಇದೀಗ ಜಿಂಬಾಬ್ವೆ ಮುಂದೆ ಬಂದಿದೆ.

Advertisement

ಬಾಂಗ್ಲಾದೇಶದಲ್ಲಿ ಅ.3ರಿಂದ ಆರಂಭವಾಗಬೇಕಿದ್ದ ಈ ವಿಶ್ವಕಪ್‌ ಸದ್ಯದ ಪರಿಸ್ಥಿತಿಯಲ್ಲಿ ಬಾಂಗ್ಲಾದಲ್ಲಿ ಆಟಗಾರ್ತಿಯರ ಭದ್ರತೆಯ ಕಾರಣಕ್ಕಾಗಿ ಬೇರೆ ಕಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಆತಿಥ್ಯದಿಂದ ಭಾರತ ಹಿಂದೆ ಸರಿದ ಬಳಿಕ ಯುಎಇಯಲ್ಲಿ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಇದೇ ವೇಳೆ ಜಿಂಬಾಬ್ವೆ ಕೂಡ ಆತಿಥ್ಯ ವಹಿಸಲು ಮುಂದೆ ಬಂದಿದೆ. ಐಸಿಸಿ ಮಂಡಳಿಯು ಆ.20ರಂದು ಈ ಬಗ್ಗೆ ನಿರ್ಧಾರ ಪ್ರಕಟಿಸಲಿದೆ.

ಜಿಂಬಾಬ್ವೆ ಈ ಹಿಂದೆ 2018 ಮತ್ತು 2023ರ ಏಕದಿನ ವಿಶ್ವಕಪ್‌ ಅರ್ಹತಾ ಕೂಟದ ಆತಿಥ್ಯವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಅದಕ್ಕಿಂತ ಮೊದಲು 2003ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಕೀನ್ಯಾ ಜತೆಗೂಡಿ ಜಿಂಬಾಬ್ವೆ ವಿಶ್ವಕಪ್‌ ಕೂಟದ ಆತಿಥ್ಯ ವಹಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next