Advertisement
ಪಾಕಿಸ್ಥಾನ ಗೆದ್ದರೆ?ಈ ಗೆಲುವಿನಿಂದ ಆಸ್ಟ್ರೇಲಿಯ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಅಜೇಯ ತಂಡವಾಗಿ ಸೆಮಿಫೈನಲಿಗೇರಿದೆ. ಈ ಸೋಲಿನಿಂಧ ಭಾರತ ತಾನಾಡಿದ ನಾಲ್ಕು ಪಂದ್ಯಗಳಿಂದ ನಾಲ್ಕಂಕ ಸಂಪಾದಿಸಿದೆ. ಲೀಗ್‌ನ ಅಂತಿಮ ಪಂದ್ಯದಲ್ಲಿ ಸೋಮವಾರ ನ್ಯೂಜಿಲ್ಯಾಂಡ್ ತಂಡವು ಪಾಕಿಸ್ಥಾನವನ್ನು ಎದುರಿಸಲಿದೆ. ನ್ಯೂಜಿಲ್ಯಾಂಡ್ ಸದ್ಯ ನಾಲ್ಕಂಕ ಹೊಂದಿದ್ದು ಪಾಕಿಸ್ಥಾನ ವಿರುದ್ಧ ಗೆದ್ದರೆ ಅದು ಸೆಮಿಫೈನಲಿಗೇರಲಿದೆ. ಒಂದು ವೇಳೆ ಪಾಕಿಸ್ಥಾನ ಗೆದ್ದರೆ ಎಲ್ಲ ಮೂರು ತಂಡಗಳು ತಲಾ ನಾಲ್ಕಂಕ ಪಡೆಯಲಿವೆ. ಆಗ ಉತ್ತಮ ರನ್‌ಧಾರಣೆ ಇರುವ ತಂಡ ಸೆಮಿಫೈನಲಿಗೇರಲಿದೆ.
Related Articles
Advertisement
ಈ ಮೊದಲು ಗ್ರೇಸ್ ಹ್ಯಾರಿಸ್ ಮತ್ತು ಕೊನೆ ಹಂತದಲ್ಲಿ ಎಲಿಸ್ ಪೆರ್ರಿ ಅವರ ಬಿರುಸಿನ ಆಟದಿಂದಾಗಿ ಆಸ್ಟ್ರೇಲಿಯದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು. ತಂಡದ ಪರ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ 40 ಹೊಡೆದರೆ ಟಹ್ಲಿಯಾ ಮೆಕ್‌ಗ್ರಾಥ್ 32, ಎಲಿಸ್ ಪೆರ್ರಿ 32 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು.
ಸಂಕ್ಷಿಪ್ತ ಸ್ಕೋರ್ಆಸ್ಟ್ರೇಲಿಯ 8 ವಿಕೆಟಿಗೆ 151 (ಗ್ರೇಸ್ ಹ್ಯಾರಿಸ್ 40, ಟಹ್ಲಿಯಾ 32, ಎಲಿಸ್ ಪೆರ್ರಿ 32, ರೇಣುಕಾ ಸಿಂಗ್ 24ಕ್ಕೆ 2, ದೀಪ್ತಿ ಶರ್ಮ 28ಕ್ಕೆ 2); ಭಾರತ 9 ವಿಕೆಟಿಗೆ 142 (ಶಫಾಲಿ ಶರ್ಮ 20, ರಾಡ್ರಿಗಸ್ 16, ಹರ್ಮನ್‌ಪ್ರೀತ್ 54 ಔಟಾಗದೆ, ದೀಪ್ತಿ ಶರ್ಮ 29, ಅನ್ನಾಬೆಲ್ ಸೂಥರ್‌ಲ್ಯಾಂಡ್ 22ಕ್ಕೆ 2, ಸೋಫಿ ಮೊಲಿನೆಕ್ಸ್ 32ಕ್ಕೆ 2).