Advertisement

ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌: ಮೂರಕ್ಕೇರಿದ ಸ್ಮತಿ ಮಂಧನಾ

04:44 AM Mar 11, 2019 | |

ದುಬಾೖ: ಪ್ರವಾಸಿ ಇಂಗ್ಲೆಂಡ್‌ ಎದುರಿನ ಟಿ20 ಸರಣಿಯಲ್ಲಿ ಭಾರತ ವೈಟ್‌ವಾಶ್‌ ಅನುಭವಿಸಿದರೂ ಉಸ್ತುವಾರಿ ನಾಯಕಿ ಸ್ಮತಿ ಮಂಧನಾ ನೂತನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ 3 ಸ್ಥಾನಗಳ ಪ್ರಗತಿ ಸಾಧಿಸಿ ಮೂರನೇ ಸ್ಥಾನಕ್ಕೇರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಆಗಿದೆ.

Advertisement

ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ನಂಬರ್‌ ವನ್‌ ಆಗಿರುವ ಮಂಧನಾ, ಟಿ20 ಸರಣಿಯ 3 ಪಂದ್ಯಗಳಿಂದ 72 ರನ್‌ ಮಾಡಿದ್ದರು. ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ರಾಧಾ ಯಾದವ್‌ 5 ಸ್ಥಾನ ಮೇಲೇರಿದ್ದು, 5ನೇ ಸ್ಥಾನಕ್ಕೆ ಬಂದಿದ್ದಾರೆ. ಇಂಗ್ಲೆಂಡ್‌ ವಿರುದ್ಧ 2 ಪಂದ್ಯಗಳಿಂದ ರಾಧಾ 3 ವಿಕೆಟ್‌ ಉರುಳಿಸಿದ್ದರು. ಎಡಗೈ ಸ್ಪಿನ್ನರ್‌ ಏಕ್ತಾ ಬಿಷ್ಟ್ 59ರಿಂದ 56ನೇ ಸ್ಥಾನಕ್ಕೆ, ಆಫ್ ಸ್ಪಿನ್ನರ್‌ ಅನುಜಾ ಪಾಟೀಲ್‌ 35ರಿಂದ 31ನೇ ಸ್ಥಾನಕ್ಕೆ ಏರಿದ್ದಾರೆ.

ಇಂಗ್ಲೆಂಡ್‌ ನಂ.2
ಭಾರತದ ವಿರುದ್ಧ 3-0 ಸರಣಿ ಜಯದ ಮೂಲಕ ಇಂಗ್ಲೆಂಡ್‌ ತಂಡ ನ್ಯೂಜಿಲ್ಯಾಂಡನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೆ ನೆಗೆದಿದೆ. ಈ ಸಾಧನೆಗಾಗಿ ಮೂರಂಕ (277) ಸಂಪಾದಿಸಿದ ಆಂಗ್ಲ ವನಿತೆಯರು ಅಗ್ರಸ್ಥಾನಿ ಆಸ್ಟ್ರೇಲಿಯಕ್ಕಿಂತ 6 ಅಂಕಗಳ ಹಿನ್ನಡೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next