ಇಂದೋರ್: ಭಾರತ-ಆಸ್ಟ್ರೇಲಿಯ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ವಿಶ್ವ ಟೆಸ್ಟ್ ರ‍್ಯಾಂಕ್‌ನ ನಂ.1 ಸ್ಥಾನಕ್ಕೇರಿದ್ಧಾರೆ.
ಬುಧವಾರ ಬಿಡುಗಡೆಗೊಂಡಿರುವ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆರ್. ಅಶ್ವಿನ್ ಇಂಗ್ಲಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಅವರನ್ನು ಹಿಂದಿಕ್ಕಿ ವಿಶ್ವದ ನಂ.1 ಪಟ್ಟಕ್ಕೇರಿದ್ದಾರೆ.
864 ಅಂಕಗಳೊಂದಿಗೆ ನಂ.1 ಸ್ಥಾನಕ್ಕೇರಿರುವ ಆರ್.ಅಶ್ವಿನ್ ಎಂಟು ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ದೆಹಲಿಯಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ್ದ ಆರ್. ಅಶ್ವಿನ್ ಅಂಕದಲ್ಲಿ ಗಣನೀಯ ಏರಿಕೆ ಎರಡನೇ ಸ್ಥಾನಕ್ಕೆ ಏರಿದ್ದರು.
ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯ ಅಗ್ರಸ್ಥಾನದಲ್ಲಿ ಭದ್ರವಾಗಿದ್ದ ಆಸ್ಟ್ರೇಲಿಯ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ7 ವಿಕೆಟ್ ಕೀಳುವ ಮೂಲಕ ಇಂಗ್ಲಂಡ್ ವೇಗಿ ಜೇಮ್ಸ್ ಆಂಡರ್‌ಸನ್ ಕಮಿನ್ಸ್ ಅವರನ್ನು ಹಿಂದಿಕ್ಕಿ ನಂ .1 ಸ್ಥಾನಕ್ಕೇರಿದ್ದರು. ಆದರೆ ಇದೀಗ ಆರ್.ಅಶ್ವಿನ್ ಒಂದು ಸ್ಥಾನ ಮೇಲೇರಿ ಅಗ್ರಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ:
ಅಂದು ಕೊಹ್ಲಿ ವಿಶ್ವಕ್ಕೆ ವಿರಾಟ್ ರೂಪ ತೋರಿಸಿದ್ದ; ಮಾಲಿಂಗಾಗೆ ಈಗಲೂ ಕಾಡುವ ಶತಕವದು…