Advertisement

ICC ಟೆಸ್ಟ್‌ ಚಾಂಪಿಯನ್‌ಶಿಪ್‌: ಜೈಸ್ವಾಲ್‌ ನಂ.1, ಭಾರತ ನಂ.2

11:18 PM Feb 19, 2024 | Team Udayavani |

ದುಬಾೖ: ರಾಜ್‌ಕೋಟ್‌ ಟೆಸ್ಟ್‌ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ ಯಶಸ್ವಿ ಜೈಸ್ವಾಲ್‌ ಈಗ 2023-25ರ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸರ್ವಾಧಿಕ ರನ್‌ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಭಾರತ ತಂಡ ದ್ವಿತೀಯ ಸ್ಥಾನಕ್ಕೆ ಏರಿದೆ.

Advertisement

ಸತತ 2 ದ್ವಿಶತಕ ಬಾರಿಸುವ ಮೂಲಕ ಪ್ರಸಕ್ತ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅವರ ಒಟ್ಟು ರನ್‌ ಗಳಿಕೆ 861ಕ್ಕೆ ಏರಿದೆ. ಇದರಲ್ಲಿ ಒಂದು ಶತಕ ಹಾಗೂ 2 ಅರ್ಧ ಶತಕಗಳೂ ಸೇರಿವೆ. ಇದರೊಂದಿಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಸೀಸನ್‌ ಒಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ಸಾಧನೆ ಜೈಸ್ವಾಲ್‌ ಅವರದ್ದಾಗಿದೆ.

855 ರನ್‌ ಗಳಿಸಿರುವ ಆಸ್ಟ್ರೇಲಿಯದ ಉಸ್ಮಾನ್‌ ಖ್ವಾಜಾ ದ್ವಿತೀಯ ಸ್ಥಾನಕ್ಕೆ ಇಳಿದರು. ಜೈಸ್ವಾಲ್‌ ಈ ಸರಣಿಯಲ್ಲಿ ಇನ್ನೂ 2 ಪಂದ್ಯಗಳನ್ನು ಆಡಲಿದ್ದು, ತಮ್ಮ ಒಟ್ಟು ರನ್‌ ಗಳಿಕೆಯನ್ನು ಸಾವಿರದಾಚೆ ವಿಸ್ತರಿಸುವ ಎಲ್ಲ ಸಾಧ್ಯತೆ ಇದೆ.

ಇಂಗ್ಲೆಂಡ್‌ನ‌ ಜಾಕ್‌ ಕ್ರಾಲಿ 3ನೇ (706 ರನ್‌), ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ 4ನೇ (687 ರನ್‌), ಮಿಚೆಲ್‌ ಮಾರ್ಷ್‌ 5ನೇ (630 ರನ್‌) ಸ್ಥಾನದಲ್ಲಿದ್ದಾರೆ.

ದ್ವಿತೀಯ ಸ್ಥಾನಕ್ಕೆ ಭಾರತ
ಪ್ರಸಕ್ತ ಟೆಸ್ಟ್‌ ಚಾಂಪಿಯನ್‌ಶಿಪ್‌ ಸೀಸನ್‌ನಲ್ಲಿ 4ನೇ ಗೆಲುವು ಸಾಧಿಸುವ ಮೂಲಕ ಭಾರತವೀಗ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ. ಭಾರತದ ಪಾಯಿಂಟ್‌ ಪರ್ಸಂಟೇಜ್‌ 59.52. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮೂರಕ್ಕೆ ಇಳಿದಿದೆ (55.00). ನ್ಯೂಜಿಲ್ಯಾಂಡ್‌ ಅಗ್ರಸ್ಥಾನ ಅಲಂಕರಿಸಿದೆ (75.00). ಈ ಸೀಸನ್‌ನಲ್ಲಿ 5ನೇ ಸೋಲನುಭವಿಸಿದ ಇಂಗ್ಲೆಂಡ್‌ ಎಂಟಕ್ಕೆ ಕುಸಿದಿದೆ (21.87).

Advertisement
Advertisement

Udayavani is now on Telegram. Click here to join our channel and stay updated with the latest news.

Next