ಮುಂಬೈ: ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಮೊದಲು ನಡೆಯಲಿರುವ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಭಾರತ ಒಂದೇ ಅಭ್ಯಾಸ ಪಂದ್ಯ ಆಡಲಿದೆ.
ಮೇ 27ರಿಂದ ಜೂನ್ 1ರವರೆಗೆ ಅಭ್ಯಾಸ ಪಂದ್ಯಗಳು ನಡೆಯಲಿದೆ. ಜೂನ್ 1ರಂದು ಏಕೈಕ ಪಂದ್ಯ ನಡೆಯಲಿದೆ. ಅದು ಭಾರತದ್ದಾಗಿದೆ. ರೋಹಿತ್ ಬಳಗವು ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಇದು ಎಲ್ಲಿ ನಡೆಯಲಿದೆ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.
ಫ್ಲೋರಿಡಾದಲ್ಲಿ 29 ರಂದು ಇಂಟ್ರಾ-ಸ್ಕ್ವಾಡ್ ಆಡುತ್ತಿರುವ ದಕ್ಷಿಣ ಆಫ್ರಿಕಾ ಸೇರಿದಂತೆ ಒಟ್ಟು 17 ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ಈ ಅಭ್ಯಾಸ ಪಂದ್ಯಗಳು ಅಂತಾರಾಷ್ಟ್ರೀಯ ಟಿ20 ಸ್ಥಾನಮಾನವನ್ನು ಹೊಂದಿರುವುದಿಲ್ಲ, ಇದರಿಂದಾಗಿ ತಂಡಗಳು ತಮ್ಮ 15-ಆಟಗಾರರ ತಂಡದ ಎಲ್ಲಾ ಸದಸ್ಯರನ್ನು ಕಣಕ್ಕಿಳಿಸಲು ಅನುವು ಮಾಡಿಕೊಡುತ್ತದೆ.
ಐಸಿಸಿ ಪ್ರಕಾರ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆ ಮುನ್ನ 16 ಅಭ್ಯಾಸ ಪಂದ್ಯಗಳನ್ನು ಟೆಕ್ಸಾಸ್ ನ ಗ್ರ್ಯಾಂಡ್ ಪ್ರೈರೀ ಕ್ರಿಕೆಟ್ ಸ್ಟೇಡಿಯಂ, ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಕ್ವೀನ್ಸ್ ಪಾರ್ಕ್ ಓವಲ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊದ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಆಯೋಜಿಸಲಾಗುತ್ತದೆ.
ಇಲ್ಲಿದೆ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ