Advertisement

ಟಿ20 ವಿಶ್ವಕಪ್: ಶ್ರೀಲಂಕಾಗೆ ಸುಲಭದ ತುತ್ತಾದ ಐರ್ಲೆಂಡ್

01:25 PM Oct 23, 2022 | Team Udayavani |

ಹೋಬಾರ್ಟ್: ಐಸಿಸಿ ಟಿ20 ವಿಶ್ವಕಪ್ ನ ರವಿವಾರದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವು ಸುಲಭ ಜಯ ಸಾಧಿಸಿದೆ. ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಲಂಕಾ ತಂಡವು 9 ಅಂತರದ ಗೆಲುವು ಸಾಧಿಸಿತು.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ತಂಡವು ಗಳಿಸಿದ್ದು 128 ರನ್ ಮಾತ್ರ. ಸುಲಭವಾಗಿ ಗುರಿ ಬೆನ್ನತ್ತಿದ ಲಂಕಾ ಒಂದು ವಿಕೆಟ್ ಕಳೆದುಕೊಂಡು 15 ಓವರ್ ಗಳಲ್ಲಿ ಜಯ ಸಾಧಿಸಿತು

ಐರ್ಲೆಂಡ್ ತಂಡಕ್ಕೆ ಅನುಭವಿ ಸ್ಟರ್ಲಿಂಗ್ ಮತ್ತು ಟೆಕ್ಟರ್ ಮಾತ್ರ ಬ್ಯಾಟಿಂಗ್ ನೆರವು ನೀಡಿದರು. ಸ್ಟರ್ಲಿಂಗ್ 34 ರನ್ ಗಳಿಸಿದರೆ, ಹ್ಯಾರಿ ಟೆಕ್ಟರ್ 45 ರನ್ ಬಾರಿಸಿದರು. ಲಂಕಾ ಪರ ಹಸರಂಗ ಮತ್ತು ತೀಕ್ಷಣ ತಲಾ 2 ವಿಕೆಟ್ ಕಿತ್ತರು.

ಚೇಸಿಂಗ್ ಆರಂಭಿಸಿದ ಲಂಕಾಗೆ ಉತ್ತಮ ಬ್ಯಾಟಿಂಗ್ ನೆರವು ದೊರಕಿತು. ಆರಂಭಿಕರಾದ ಕುಸಾಲ್ ಮೆಂಡಿಸ್ ಅಜೇಯ 68 ರನ್ ಗಳಿಸಿದರೆ, ಧನಂಜಯ ಡಿಸಿಲ್ವಾ 31 ರನ್ ಮಾಡಿದರು. ಇವರಿಬ್ಬರು ಮೊದಲ ವಿಕೆಟ್ ಗೆ 63 ರನ್ ಗಳಿಸಿದರು. ನಂತರ ಬಂದ ಚರಿತ ಅಸಲಂಕ ಅಜೇಯ  31 ರನ್ ಮಾಡಿದರು. 15 ಓವರ್ ಗಳಲ್ಲಿ ಲಂಕಾ 133 ರನ್ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next