Advertisement
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಬುಮ್ರಾ 904 ಅಂಕಗಳೊಂದಿಗೆ ಆರ್. ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದರು. ಅಶ್ವಿನ್ 2016ರಲ್ಲಿ ಈ ಎತ್ತರ ತಲುಪಿದ್ದರು. ಮೆಲ್ಬರ್ನ್ ಟೆಸ್ಟ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ, ತಮ್ಮ ರೇಟಿಂಗ್ ಅಂಕವನ್ನು 907ಕ್ಕೆ ಏರಿಸಿಕೊಂಡರು. ಇದು ಟೆಸ್ಟ್ ರ್ಯಾಂಕಿಂಗ್ ರೇಟಿಂಗ್ ಅಂಕದ ಜಂಟಿ 17ನೇ ಸ್ಥಾನ. ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಡೆರೆಕ್ ಅಂಡರ್ವುಡ್ ಕೂಡ 907 ಅಂಕ ಹೊಂದಿದ್ದರು.
ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಅವರದು 6 ಸ್ಥಾನಗಳ ಪ್ರಗತಿ. ಅವರೀಗ 5ನೇ ಸ್ಥಾನಕ್ಕೆ ಏರಿದ್ದಾರೆ (803). ರವೀಂದ್ರ ಜಡೇಜ ಒಂದು ಸ್ಥಾನ ಕುಸಿದು 10ಕ್ಕೆ ಬಂದರು (750). ಜೈಸ್ವಾಲ್ ನಂ.4
ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಯಶಸ್ವಿ ಜೈಸ್ವಾಲ್ ಒಂದು ಸ್ಥಾನ ಮೇಲೇರಿದ್ದು, ಜೀವನಶ್ರೇಷ್ಠ 4ನೇ ಸ್ಥಾನ ಅಲಂಕರಿಸಿದ್ದಾರೆ (854). ಜೈಸ್ವಾಲ್ ಮೆಲ್ಬರ್ನ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ 80 ಪ್ಲಸ್ ರನ್ ಹೊಡೆದಿದ್ದರು. ಮೆಲ್ಬರ್ನ್ನಲ್ಲಿ ಶತಕ ಬಾರಿಸಿದ ನಿತೀಶ್ ಕುಮಾರ್ ರೆಡ್ಡಿ ಅವರದು 20 ಸ್ಥಾನಗಳ ನೆಗೆತ. ಅವರೀಗ 53ನೇ ಸ್ಥಾನಕ್ಕೆ ಬಂದಿದ್ದಾರೆ.