Advertisement

ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಪ್ರಶಸ್ತಿ;12.87 ಕೋ.ರೂ.ಗೇರಿಸಿದ ಐಸಿಸಿ

02:56 PM May 06, 2017 | Team Udayavani |

ನವದೆಹಲಿ: ಪ್ರಸಕ್ತ ವರ್ಷ ನಡೆಯಲಿರುವ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ನ ಪ್ರಶಸ್ತಿ ಮೊತ್ತವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) 12.87 ಕೋಟಿ ರೂ.ಗೆ ಏರಿಸಿದೆ. ಭಾರತದಲ್ಲಿ ನಡೆದ ಹಿಂದಿನ ವಿಶ್ವಕಪ್‌ಗೆ ಹೋಲಿಸಿದರೆ ಇದು 10 ಪಟ್ಟು ಏರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಐಸಿಸಿ ಪ್ರಧಾನ ಕಾರ್ಯದರ್ಶಿ ಡೇವಿಡ್‌ ರಿಚಡ್ಸìನ್‌, ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಸಮಾನತೆ ಮತ್ತು ಮನ್ನಣೆ ನೀಡುವ ದೃಷ್ಟಿಯಿಂದ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲಾಗಿದೆ. ಬದಲಾವಣೆ ಅನ್ನುವುದು ರಾತ್ರಿ ಬೆಳಗಾಗುವುದರೊಳಗೆ ಆಗುವುದಲ್ಲ.

Advertisement

ಹಂತ ಹಂತವಾಗಿ ಆ ಕೆಲಸವನ್ನು ಮಾಡಬೇಕಾಗಿದೆ. ಜಾಗತಿಕವಾಗಿ ಮಹಿಳಾ ಕ್ರಿಕೆಟ್‌ ಖ್ಯಾತಿ ಪಡೆಯುತ್ತಿದೆ, ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದರು. ಇಂಗ್ಲೆಂಡ್‌ನ‌ಲ್ಲಿ ಜೂನ್‌ 24ರಿಂದ ಜುಲೈ 23ರವರೆಗೆ ವಿಶ್ವಕಪ್‌ ನಡೆಯಲಿದೆ. ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಅದರಲ್ಲಿ ಅಗ್ರ 4 ಶ್ರೇಯಾಂಕಿತ ತಂಡಗಳು ನೇರವಾಗಿ ಪ್ರವೇಶಿಸಿದರೆ, ಉಳಿದ 4 ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಪ್ರವೇಶಿಸಿವೆ. ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಡಿಆರ್‌ಎಸ್‌ ಅಳವಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next