Advertisement

ICC player of the month; ಶಮಿ,ಮ್ಯಾಕ್ಸವೆಲ್ ಹಿಂದಿಕ್ಕಿ ಪ್ರಶಸ್ತಿ ಗೆದ್ದ ಟ್ರಾವಿಸ್ ಹೆಡ್

04:07 PM Dec 11, 2023 | Team Udayavani |

ಮುಂಬೈ: ನವೆಂಬರ್ 2023 ರ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಂಗಳ ಆಟಗಾರ ಪ್ರಶಸ್ತಿಗಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಆಯ್ಕೆಯಾಗಿದ್ದಾರೆ.

Advertisement

ಹೆಡ್ ಜೊತೆಯಲ್ಲಿ ಭಾರತದ ಮೊಹಮ್ಮದ್ ಶಮಿ ಮತ್ತು ಅವರ ಆಸ್ಟ್ರೇಲಿಯಾದ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪರ್ಧೆಯಲ್ಲಿದ್ದರು.

ವಿಶ್ವಕಪ್ ಗೆ ಮೊದಲೇ ಗಾಯಗೊಂಡಿದ್ದ ಟ್ರಾವಿಸ್ ಹೆಡ್ ಅವರ ಮೇಲೆ ಆಸೀಸ್ ಸಮಿತಿ ನಂಬಿಕೆ ಇರಿಸಿತ್ತು. ಅರ್ಧ ವಿಶ್ವಕಪ್ ಬಳಿ ಆಡುವ ಬಳಗಕ್ಕೆ ಬಂದ ಹೆಡ್ ಅಗತ್ಯ ಸಮಯದಲ್ಲಿ ತಂಡಕ್ಕೆ ನೆರವಾದರು. ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ತಂಡವನ್ನು ಜಯದತ್ತ ಮುನ್ನಡೆಸಲು ಟ್ರಾವಿಸ್ ಹೆಡ್ ಪಾತ್ರ ಅತ್ಯಂತ ನಿರ್ಣಾಯಕ.

ಫೈನಲ್ ಪಂದ್ಯದಲ್ಲಿ ಚೇಸ್ ಮಾಡುವ ವೇಳೆ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 137 ರನ್ ಗಳಿಸಿದ್ದರು. ಇವರ ಸಾಹಸದಿಂದ ಆಸೀಸ್ ತಂಡವು ಆರು ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ 48 ಎಸೆತಗಳಲ್ಲಿ62 ರನ್ ಬಾರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next