Advertisement

ಐಸಿಸಿ ಏಕದಿನ ರ್‍ಯಾಂಕಿಂಗ್‌: ಕೊಹ್ಲಿ, ಬುಮ್ರಾ: ವರ್ಷಾಂತ್ಯದ ಅಗ್ರ ಕ್ರಿಕೆಟಿಗರು

09:42 AM Dec 24, 2019 | Team Udayavani |

ದುಬಾೖ: ಭಾರತದ ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಏಕದಿನದ ನಂಬರ್‌ ವನ್‌ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ ಎಂಬ ಗೌರವದೊಂದಿಗೆ 2019ರ ಕ್ರಿಕೆಟ್‌ ವರ್ಷವನ್ನು ಮುಗಿಸಿದ್ದಾರೆ.

Advertisement

ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಏಕದಿನ ಸರಣಿ ಮುಗಿದ ಬಳಿಕ ಪರಿಷ್ಕರಿಸಲಾದ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಕೊಹ್ಲಿ 887 ಅಂಕಗಳೊಂದಿಗೆ ಅಗ್ರ ಪಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರಣಿಯಲ್ಲಿ ಆಡದೇ ಹೋದರೂ ಜಸ್‌ಪ್ರೀತ್‌ ಬುಮ್ರಾ ಅವರ ನಂಬರ್‌ ವನ್‌ ಬೌಲಿಂಗ್‌ ಗೌರವಕ್ಕೇನೂ ಚ್ಯುತಿಯಾಗಿಲ್ಲ.

ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ರನ್‌ ಪೈಪೋಟಿಯಲ್ಲಿರುವ ಕೊಹ್ಲಿ-ರೋಹಿತ್‌ ನಡುವೆ ಕೇವಲ 14 ಅಂಕಗಳ ಅಂತರವಷ್ಟೇ ಇದೆ. ಈ ಮೂವರನ್ನು ಹೊರತುಪಡಿಸಿದರೆ ಭಾರತದ ಬೇರೆ ಕ್ರಿಕೆಟಿಗರ್ಯಾರೂ ಅಗ್ರ ಹತ್ತರ ಯಾದಿಯಲ್ಲಿಲ್ಲ.

ಸರಣಿಯಲ್ಲಿ 185 ರನ್‌ ಬಾರಿಸಿದ ಕೆ.ಎಲ್‌. ರಾಹುಲ್‌ 17 ಸ್ಥಾನ ಜಿಗಿದಿದ್ದು, 71ನೇ ಸ್ಥಾನ ಅಲಂಕರಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ 104ರಿಂದ 81ನೇ ಸ್ಥಾನಕ್ಕೆ ಬಂದಿದ್ದಾರೆ.

ಶೈ ಹೋಪ್‌ ನೆಗೆತ
ಭಾರತದೆದುರು ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ವೆಸ್ಟ್‌ ಇಂಡೀಸ್‌ ಆರಂಭಕಾರ ಶೈ ಹೋಪ್‌ ಮೊದಲ ಸಲ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಚೆನ್ನೈಯಲ್ಲಿ ಅಜೇಯ 102 ರನ್‌, ಸರಣಿಯಲ್ಲಿ ಒಟ್ಟು 222 ರನ್‌ ಬಾರಿಸಿದ ಹೋಪ್‌ 782 ಅಂಕಗಳೊಂದಿಗೆ 9ನೇ ಸ್ಥಾನ ಪಡೆದಿದ್ದಾರೆ.

Advertisement

ಶಿಮ್ರನ್‌ ಹೆಟ್‌ಮೈರ್‌ 6 ಸ್ಥಾನಗಳ ಪ್ರಗತಿಯೊಂದಿಗೆ 19ಕ್ಕೆ, ನಿಕೋಲಸ್‌ ಪೂರಣ್‌ 33 ಸ್ಥಾನ ಜಿಗಿದು 30ಕ್ಕೆ, ಬೌಲಿಂಗ್‌ನಲ್ಲಿ ಶೆಲ್ಡನ್‌ ಕಾಟ್ರೆಲ್‌ 6 ಸ್ಥಾನ ಮೇಲೇರಿ 30ನೇ ಕ್ರಮಾಂಕಕ್ಕೆ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next