Advertisement
ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಫೀಲ್ಡಿಂಗ್ ನಡೆಸಲು ನಿರ್ಧರಿಸಿತು. ನಾಯಕ ರೋಹಿತ್ ಶರ್ಮ ಮತ್ತು ಸೂರ್ಯ ಕುಮಾರ್ ಯಾದವ್ ಅವರ ಉಪಯುಕ್ತ ಬ್ಯಾಟಿಂಗ್‌ನಿಂದಾಗಿ 7 ವಿಕೆಟಿಗೆ 171 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 16.4 ಓವರ್ ಗಳಲ್ಲಿ 103 ರನ್ ಗಳಿಗೆ ಸರ್ವ ಪತನ ಕಂಡು ಸೋಲಿಗೆ ಶರಣಾಯಿತು.
Related Articles
Advertisement
ಭಾರೀ ಮಳೆಯಿಂದ ಪಿಚ್ ಮತ್ತು ಹೊರಮೈದಾನ ಒದ್ದೆಯಾಗಿದ್ದರಿಂದ ಒಂದೂವರೆ ಗಂಟೆ ತಡವಾಗಿ ಪಂದ್ಯ ಆರಂಭಗೊಂಡಿತ್ತು. 8 ಓವರ್ ಮುಗಿದಾಗ ಮತ್ತೆ ಭಾರೀ ಮಳೆ ಸುರಿದ ಕಾರಣ ಸ್ವಲ್ಪ ಹೊತ್ತು ಆಟ ಸ್ಥಗಿತಗೊಂಡಿತು. ಈ ವೇಳೆ ಭಾರತ ಎರಡು ವಿಕೆಟಿಗೆ 65 ರನ್ ಗಳಿಸಿತ್ತು.
ಆಬಳಿಕ ಆಟ ಮುಂದುವರಿದ ಬಳಿಕ ರೋಹಿತ್ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಉತ್ತಮ ಬ್ಯಾಟಿಂಗ್ ಮುಂದುವರಿಸಿದ್ದು ತಂಡದ ಮೊತ್ತ 113 ರನ್ ತಲುಪಿದಾಗ ಬೇರ್ಪಟ್ಟರು. ಈ ಹಂತದಲ್ಲಿ 57 ರನ್ ಗಳಿಸಿದ ರೋಹಿತ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. 39 ಎಸೆತ ಎದುರಿಸಿದ ಅವರು ಆರು ಬೌಂಡರಿ ಮತ್ತು 2 ಸಿಕ್ಸರ್ ಹೊಡೆದರು.
ರೋಹಿತ್ ಶರ್ಮ ಔಟಾದ ಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು ಮಾತ್ರವಲ್ಲದೇ ಆಗಾಗ್ಗೆ ವಿಕೆಟ್ ಉರುಳುತ್ತ ಹೋಯಿತು. ಅಂತಿಮವಾಗಿ ತಂಡ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತ್ತು. ಸೂರ್ಯಕುಮಾರ್ 47 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 23 ರನ್ ಹೊಡೆದರು. ರವೀಂದ್ರ ಜಡೇಜ 17 ರನ್ ಗಳಿಸಿ ಅಜೇಯರಾಗಿ ಉಳಿದರು.
ಬಿಗು ದಾಳಿ ಸಂಘಟಿಸಿದ ಕ್ರಿಸ್ ಜೋರ್ಡಾನ್ ತನ್ನ 3 ಓವರ್‌ಗಳ ದಾಳಿಯಲ್ಲಿ 37 ರನ್ ನೀಡಿ ಮೂರು ವಿಕೆಟ್ ಕಿತ್ತರು. ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ಮಹತ್ವದ ಈ ಪಂದ್ಯ ದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ದರು.ಅವರು 9 ಎಸೆತ ಎದುರಿಸಿ ಒಂದು ಸಿಕ್ಸರ್ ನೆರವಿನಿಂದ 9 ರನ್ ಹೊಡೆದು ಔಟಾದರು. ರಿಷಭ್ ಪಂತ್ ಕೂಡ ಹೆಚ್ಚು ಹೊತ್ತು ನಿಲ್ಲಲು ಅಸಮರ್ಥರಾದರು.
ಭಾರೀ ಮಳೆಭಾರೀ ಮಳೆ ಸುರಿದ ಕಾರಣ ಪಿಚ್ ಮತ್ತು ಹೊರಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ನಿಗದಿತ ಸಮಯದಲ್ಲಿ ಆರಂಭವಾಗಿಲ್ಲ. ಅಂಪಾಯರ್ ಪಿಚ್ ಪರಿಶೀಲಿಸಿದ ಬಳಿಕ ಒಂದೂವರೆ ತಾಸು ತಡವಾಗಿ ಪಂದ್ಯ ಆರಂಭಿಸಲು ನಿರ್ಧರಿಸಿದರು.