Advertisement

World Cup; ಭಾರತಕ್ಕೆ ಗೆಲ್ಲಲು 257 ರನ್ ಗಳ ಗುರಿ ನೀಡಿದ ಬಾಂಗ್ಲಾ

06:07 PM Oct 19, 2023 | Team Udayavani |

ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಗುರುವಾರ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಭಾರತಕ್ಕೆ ಗೆಲ್ಲಲು 257 ರನ್ ಗಳ ಗುರಿ ನೀಡಿದೆ.

Advertisement

ಬಾಂಗ್ಲಾ ಉತ್ತಮ ಆರಂಭ ಪಡೆಯಿತು. ತಂಜಿದ್ ಹಸನ್ ಮತ್ತು ಲಿಟ್ಟನ್ ದಾಸ್ ಮೊದಲ ವಿಕೆಟ್ ಗೆ 93 ರನ್ ಗಳ ಜತೆಯಾಟವಾಡಿದರು. ತಂಜಿದ್ ಹಸನ್ 51 ರನ್ ಮತ್ತು ಲಿಟ್ಟನ್ ದಾಸ್ 66 ರನ್ ಗಳಿಸಿ ಔಟಾದರು. ನಜ್ಮುಲ್ ಹೊಸೈನ್ ಶಾಂಟೊ 8, ಮೆಹಿದಿ ಹಸನ್ ಮಿರಾಜ್ 3 ರನ್ ಗಳಿಸಿ ಬೇಗನೆ ನಿರ್ಗಮಿಸಿದರು. ತೌಹಿದ್ ಹೃದಯ್ 16 ,ಮುಶ್ಫಿಕರ್ ರಹೀಮ್ 38, ನಸುಮ್ ಅಹ್ಮದ್ 14, ಮಹಮುದುಲ್ಲಾ 46 ರನ್ ಗಳಿಸಿ ಔಟಾದರು.
50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಲು ಯಶಸ್ವಿಯಾಯಿತು.

ಭಾರತದ ಪರ ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಮತ್ತು ಕುಲದೀಪ್ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿ ಯಾದರು.

Advertisement

Udayavani is now on Telegram. Click here to join our channel and stay updated with the latest news.

Next