ಬರ್ಮಿಂಗ್‌ಹ್ಯಾಂ:ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ 265 ರನ್ನುಗಳ ಗುರಿಯನ್ನು ನೀಡಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನ ಗುರುವಾರ ನಡೆಯುತ್ತಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬಾಂಗ್ಲಾದೇಶವನ್ನು ಬ್ಯಾಟಿಂಗ್‌ಗೆ ಇಳಿಸಿದೆ.
ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿರುವ ಭಾರತ ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್‌ನ ಕೊನೆಯ ಎಸೆಯದಲ್ಲಿ ಸೌಮ್ಯ ಸರ್ಕಾರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು.
7 ನೇ ಓವರ್‌ನ 4 ನೇ ಎಸೆತದಲ್ಲಿ 19 ರನ್ ಗಳಿಸಿದ್ದ ಶಬ್ಬೀರ್ ರೆಹಮಾನ್ ಅವರ ವಿಕೆಟ್ ಪಡೆದರು. ಶಬ್ಬೀರ್ ಜಡೇಜಾ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. 70 ರನ್ ಗಳಿಸಿ ಭರ್ಜರಿ ಆಟವಾಡುತ್ತಿದ್ದ ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್‌ರನ್ನು ಕೆಧಾರ್ ಜಾಧವ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಮರಳಿಸಿದರು.15 ರನ್‌ಗಳಿಸಿದ್ದ ಶಕೀಬ್ ಜಡೇಜಾ ಎಸೆದ ಚೆಂಡನ್ನು ಧೋನಿಗೆ ಕ್ಯಾಚಿತ್ತು ನಿರ್ಗಮಿಸಿದರು.
ಮುಶ್ಫೀಕರ್ ರಹೀಮ್ 61 ರನ್‌ಗಳಿಸಿದ್ದು ಜೊತೆಗೆ ಮುಶ್ರಫೆ ಮೋರ್ಟಾಝಾ ಅಜೇಯರಾಗಿ 30 ರನ್ಗಳ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಬಾಂಗ್ಲಾದೇಶ ನಿಗದಿತ 50 ಓವರುಗಳಲ್ಲಿ 7 ನಷ್ಟಕ್ಕೆ 264ರನ್ ಕಲೆಹಾಕಿತು.
ಇಂದಿನ ರೋಚಕ ಪಂದ್ಯ ಗೆದ್ದರೆ ಭಾರತ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನ ತಂಡವನ್ನು ಎದುರಿಸಬೇಕು.
ಭಾರತದ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ, ಕೆ.ಎಂ.ಜಾಧವ್, ಹಾರ್ದಿಕ್, ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಬುಮ್ರಾ