ಮುಂಬಯಿ : ಐಸಿಸಿ ದಶಕದ ಶ್ರೇಷ್ಠ ತಂಡವನ್ನು ಪ್ರಕಟ ಮಾಡಿದ್ದು, ಏಕದಿನ ಹಾಗೂ ಟಿ-ಟ್ವಿಂಟಿ ವಿಭಾಗದಲ್ಲಿ ಭಾರತೀಯ ಆಟಗಾರರು ಮೇಲುಗೈ ಸಾಧಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ದಶಕದ ಶ್ರೇಷ್ಠ ತಂಡವನ್ನು ಪಟ್ಟಿ ಮಾಡಿದ್ದು, ಏಕದಿನ,ಟಿ-ಟ್ವಿಂಟಿ ಹಾಗೂ ಟೆಸ್ಟ್ ವಿಭಾಗದಲ್ಲಿ ಪ್ರಭಾವ ಬೀರಿದ ಹಾಗೂ ಪ್ರೇಕ್ಷಕರು ಮೆಚ್ಚಿದ ವಿವಿಧ ದೇಶದ ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೆಲ ಹಾಲಿ ಹಾಗೂ ಮಾಜಿ ಆಟಗಾರರು ಇದ್ದಾರೆ. ವಿಶೇಷವೆಂದರೆ ಮೂರು ವಿಭಾಗದಲ್ಲಿ ಇರುವ ಶ್ರೇಷ್ಠಮಟ್ಟದ ಆಟಗಾರರನ್ನು ಆಯ್ಕೆ ಮಾಡಿದ್ದು ಪ್ರೇಕ್ಷಕರೇ.
ಟೆಸ್ಟ್ ಒಂದನ್ನು ಹೊರತುಪಡಿಸಿದರೆ ಏಕದಿನ ಹಾಗೂ ಟಿ-ಟ್ವಿಂಟಿಯಲ್ಲಿ ಭಾರತೀಯ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಏಕದಿನದ ದಶಕದ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಮಹೀಂದ್ರ ಸಿಂಗ್ ಧೋನಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದರ ಜತೆಗೆ ಟಿ-ಟ್ವಿಂಟಿ ವಿಭಾಗದಲ್ಲಿಯೂ ಧೋನಿ,ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ ಅಂದರೆ ಟಿ-ಟ್ವಿಂಟಿ ಹಾಗೂ ಏಕದಿನ ದಶಕದ ತಂಡಕ್ಕೆ ಮಹೀಂದ್ರ ಧೋನಿಯ ನಾಯಕರಾಗಿದ್ದಾರೆ.
ಏಕದಿನ ದಶಕದ ತಂಡ : ರೋಹಿತ್ ಶರ್ಮಾ,ಡೇವಿಡ್ ವಾರ್ನರ್,ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಾಕೀಬ್ ಅಲ್ ಹಸನ್, ಮಹೀಂದ್ರ ಸಿಂಗ್ ಧೋನಿ (ನಾಯಕ), ಬೆನ್ ಸ್ಟೋಕ್ಸ್,ಮಿಚೆಲ್ ಸ್ಟ್ರಾರ್ಕ್, ಟ್ರೆಂಟ್ ಬೌಲ್ಟ್, ಇಮ್ರಾನ್ ತಾಹೀರ್,ಲಸಿತ್ ಮಾಲಿಂಗ
ಟಿ-ಟ್ವಿಂಟ್ ದಶಕದ ತಂಡ : ರೋಹಿತ್ ಶರ್ಮಾ,ಕ್ರಿಸ್ ಗೇಲ್,ಆರೋನ್ ಫಿಂಚ್,ವಿರಾಟ್ ಕೊಹ್ಲಿ,ಗ್ಲೆನ್ ಮ್ಯಾಕ್ಸ್ ವೆಲ್, ಮಹೀಂದ್ರ ಸಿಂಗ್ ಧೋನಿ (ನಾಯಕ),ಕಿರಾನ್ ಪೊಲಾರ್ಡ್,ರಶೀದ್ ಖಾನ್,ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ,
ಟೆಸ್ಟ್ ದಶಕದ ತಂಡ : ಅಲೆಸ್ಟರ್ ಕುಕ್,ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ (ನಾಯಕ) ಸ್ಟೀವ್ ಸ್ಮಿತ್, ಕುಮಾರ್ ಸಂಗಕಾರ,ಬೆನ್ ಸ್ಟೋಕ್ಸ್, ಆರ್ ಅಶ್ವಿನ್,ಡೇಲ್ ಸ್ಟೇನ್,ಸ್ಟುವರ್ಟ್ ಬ್ರಾಡ್,ಜೇಮ್ಸ್ ಆ್ಯಂಡರ್ಸನ್.
ಐಸಿಸಿಯ ದಶಕ ಪ್ರಶಸ್ತಿಗಳ ಘೋಷಣೆ ನಾಳೆ ಆಗಲಿದ್ದು, ಪ್ರಶಸ್ತಿ ರೇಸ್ ನಲ್ಲಿ ವಿರಾಟ್ ಕೊಹ್ಲಿ ಮೂರು ವಿಭಾಗದಲ್ಲೂ ಇದ್ದಾರೆ.