ದುಬೈ: 14ನೇ ಆವೃತ್ತಿಯ ಐಪಿಎಲ್ ಕೂಟ ಮುಗಿಯುತ್ತಿದ್ದಂತೆ ಅರಬ್ಬರ ನಾಡಿನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಅ.17ರಂದು ಒಮನ್ ನಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆ ಚಾಲನೆ ದೊರಕಲಿದೆ. ಇದೀಗ ಐಸಿಸಿ ವಿಶ್ವಕಪ್ ವಿಜೇತರ ಪ್ರಶಸ್ತಿ ಮೊತ್ತವನ್ನು ಘೋಷಣೆ ಮಾಡಿದೆ.
ವಿಶ್ವಕಪ್ ವಿಜೇತರಿಗೆ 1,600,000 ಅಮೇರಿಕನ್ ಡಾಲರ್, ಎರಡನೇ ಸ್ಥಾನಿ ತಂಡಕ್ಕೆ 800,000 ಅ.ಡಾಲರ್, ಸೆಮಿ ಫೈನಲ್ ಪ್ರವೇಶಿಸಿದ ಮತ್ತೆರಡು ತಂಡಗಳಿಗೆ ತಲಾ 400,000 ಅ.ಡಾಲರ್, ರೌಂಡರ್ 2 ವಿನ್ನರ್ ಗಳಿಗೆ 40,000 ಅ.ಡಾಲರ್ ಮತ್ತು ರೌಂಡ್ 2 ಎಕ್ಸಿಟ್ ಗೆ 70,000 ಅ.ಡಾಲರ್ ಮತ್ತು ರೌಂಡ್ 1 ವಿನ್ಗೆ 40,000 ಅಮೆರಿಕನ್ ಡಾಲರ್ ಮೊತ್ತ ಸಿಗಲಿದೆ.
ಕೂಟವು ಸೂಪರ್ 12 ಮಾದರಿಯಲ್ಲಿ ನಡೆಯಲಿದೆ. ಈಗಾಗಲೇ ಈ ಸುತ್ತಿಗೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಪಡೆದಿದೆ. ಉಳಿದ ನಾಲ್ಕು ತಂಡಗಳು ಅರ್ಹತಾ ಸುತ್ತಿನ ಪಂದ್ಯಾವಳಿ ಆಡಿ ಪ್ರಮುಖ ಸುತ್ತು ಪ್ರವೇಶ ಪಡೆಯಬೇಕಿದೆ.
ಇದನ್ನೂ ಓದಿ:ಶಾರುಖ್ ಗೆ ತಟ್ಟಿದ ಪುತ್ರನ ಡ್ರಗ್ಸ್ ನಂಟಿನ ಬಿಸಿ | ಬೈಜೂಸ್ ಜಾಹೀರಾತುಗಳಿಗೆ ತಾತ್ಕಾಲಿಕ ತಡೆ
ಭಾಗವಹಿಸುವ ಪ್ರತಿ ತಂಡವು ಬಹುಮಾನ ಮೊತ್ತ ಪಡೆಯಲಿದೆ. 2016ರ ಬಳಿಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ನಡೆಯುತ್ತಿದ್ದು, ಭಾರತದ ಆಯೋಜನೆಯಲ್ಲಿ ಯುಎಇ ಮತ್ತು ಒಮನ್ ನಲ್ಲಿ ಕೂಟ ನಡೆಯುತ್ತಿದೆ.