Advertisement
ಬೆಂಗಳೂರಿನಲ್ಲಿ ಈ ದಂಧೆಯಲ್ಲಿ ಸಕ್ರಿಯನಾಗಿರುವ ಈತ, ಪಾಕ್‌ನ ಲ್ಲಿಯೂ ಸಹಚರರನ್ನು ನೇಮಿಸಿಕೊಂಡಿದ್ದಾನೆ. ಅವರ ಮೂಲಕ ಅಲ್ಲಿಯೂ ನೂರಾರು ಮಂದಿ ಗ್ರಾಹಕರನ್ನು ಹೊಂದಿದ್ದಾನೆ.
ಸುಮಾರು ಒಂದೂವರೆ ವರ್ಷದಿಂದ ಈ ದಂಧೆ ನಡೆಸುತ್ತಿರುವ ಇಬ್ರಾಹಿಂ ಪುಲ್ಲಟ್ಟಿ ಬಳಿ ಗ್ರಾಹಕರ ವಿವರ ಇಲ್ಲ. ಅದನ್ನು ಆತ ಸಂಗ್ರಹಿಸಿಯೂ ಇಲ್ಲ. ಆತನಿಂದ ವಶಕ್ಕೆ ಪಡೆದುಕೊಂಡಿರುವ ಸಿಮ್ ಬಾಕ್ಸ್ ಮತ್ತು 960 ಸಿಮ್ ಕಾರ್ಡ್‌ಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಕರೆಗಳ ಪರಿವರ್ತನೆಯಿಂದ ಬರುತ್ತಿದ್ದ ಹಣದಲ್ಲಿ ಆತ ಹವಾಲಾ ದಂಧೆ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
Related Articles
ಇಬ್ರಾಹಿಂ ಪುಲ್ಲಟ್ಟಿ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ, ಆಂಧ್ರ, ತ.ನಾಡಿನಿಂದಲೂ ಸಿಮ್ ಕಾರ್ಡ್‌ಗಳನ್ನು ತರಿಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ತನ್ನ ಸ್ವಂತ ಊರಾದ ಕೇರಳದ ಮಲಪ್ಪುರಂನಿಂದಲೇ ಹೆಚ್ಚು ಸಿಮ್ ಕಾರ್ಡ್‌ಗಳು ಬಂದಿವೆ ಎಂದು ಆತ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
Advertisement
ಗ್ರಾಹಕರ ಸೋಗಿನಲ್ಲೇ ಕರೆಇಬ್ರಾಹಿಂನ ನೂರಾರು ಗ್ರಾಹಕರ ಪೈಕಿ ಒಬ್ಬ ಅಥವಾ ಕೆಲವರು ಪಾಕ್ ಗುಪ್ತಚರ ಅಧಿಕಾರಿ ಎಂದು ಪೂರ್ವ ಭಾರತದ ಸೇನಾ ಕಚೇರಿಗೆ ಕರೆ ಮಾಡಿರುವ ಸಾಧ್ಯತೆಯಿದೆ. ಆದರೆ ಆತ ಯಾರು, ಯಾವ ಕಾರಣಕ್ಕೆ ಕರೆ ಮಾಡಿದ್ದಾನೆ, ಆತನ ಹಿನ್ನೆಲೆ ಏನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.