ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿರುವ, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಪ್ರೇಮಕಾವ್ಯ “ಇಬ್ಬನಿ ತಬ್ಬಿದ ಇಳೆಯಲಿ’ (Ibbani Tabbida Ileyali) ಚಿತ್ರ ತನ್ನ ರಿಲೀಸ್ ಡೇಟ್ ಘೋಷಿಸಿದೆ. ಚಿತ್ರ ಸೆಪ್ಟೆಂಬರ್ 5ರಂದು ತೆರೆ ಕಾಣುತ್ತಿದೆ. ಗೌರಿ ಗಣೇಶ ಹಬ್ದದ ಮೇಲೆ ಕಣ್ಣಿಟ್ಟಿರುವ ಈ ಚಿತ್ರವನ್ನು ಪ್ರೇಕ್ಷಕ ಇಷ್ಟಪಡುತ್ತಾನೆ ಎಂಬ ವಿಶ್ವಾಸ ತಂಡಕ್ಕಿದೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಅದರಂತೆ ಸಿನಿಮಾವನ್ನು ಜನ ಇಷ್ಟಪಡುತ್ತಾರೆ ಎಂಬ ವಿಶ್ವಾಸ ತಂಡದ್ದು.
ಕಿರಿಕ್ ಪಾರ್ಟಿ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಬರಹಗಾರ ರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್ ಬೆಳಿಯಪ್ಪ, ರಕ್ಷಿತ್ ಅವರ ಸೆವೆನ್ ಓಡ್ಸ್ ಬರಹಗಾರರ ತಂಡದ ಪ್ರಮುಖ ಸದಸ್ಯ ಹಾಗೂ ಕಥಾ ಸಂಗಮ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಈಗ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ನಿರ್ದೇಶಿಸಿ¨ªಾರೆ. ಪ್ರಸ್ತುತ ಈ ಪೋಸ್ಟ್ ಪೊ›ಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ.
ವಿಹಾನ್ ಈ ಚಿತ್ರದ ನಾಯಕ. ಐದು ವರ್ಷಗಳ ನಂತರ ವಿಹಾನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಂಕಿತಾ ಅಮರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಮಯೂರಿ ನಟರಾಜ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ರಕ್ಷಿತ್ ಕಾಪು ಅವರ ಸಂಕಲನವಿರುವ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕಿದೆ.