ಆಯ್ಕೆಯಾಗುವುದು ಗಗನ ಕುಸುಮವಲ್ಲ. ವಿದ್ಯಾರ್ಥಿಗಳು ದಿಟ್ಟ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ಐಎಎಸ್ ಸಾಧನೆ ಮನೆಯಲ್ಲೆ ಅರಳಲು ಸಾಧ್ಯ ಎಂದು ಭಾರತೀಯ ಆಡಳಿತ ಸೇವೆ ಸಾಧಕಿ ನಂದಿನಿ ಕೆ.ಆರ್. ಅನಿಸಿಕೆ ವ್ಯಕ್ತಪಡಿಸಿದರು.
Advertisement
ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮಿಕೊಂಡಿದ್ದ ಭಾರತೀಯ ಆಡಳಿತ ಸೇವೆ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಧನಾತ್ಮಕ ಮನೋಭಾವ ಬೆಳೆಸಿಕೊಂಡು ಅಭ್ಯಾಸ ಮಾಡಬೇಕು. ತಾವು ಕಂಡಿರುವ ಕನಸು ಮತ್ತು ಆಸೆಗಳಿಗೆ ರಾಜಿ ಮಾಡಿಕೊಳ್ಳಬಾರದು. ಹೆಣ್ಣುಮಕ್ಕಳು ಕಟ್ಟುಪಾಡುಗಳಿಗೆ ಬಲಿಯಾಗದೇ ತಮ್ಮ ಅಧ್ಯಯನಕ್ಕೆ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಗುರಿ ತಲುಪಬೇಕು. ಸವಾಲುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ತನ್ವೀರ್ ಆಸೀಫ್ ಮಾತನಾಡಿ, ವಿದ್ಯಾರ್ಥಿಗಳು ಯಾವುದನ್ನು ಅಸಾಧ್ಯ ಎಂದು ಭಾವಿಸಬಾರದು. ಪಾಲಕರು ಇದನ್ನೇ ಓದಬೇಕು, ಇದನ್ನೇ ಮಾಡಬೇಕು ಎಂದು ಒತ್ತಡ ಹೇರಿದರೆ ವಿದ್ಯಾರ್ಥಿಗಳು ಖನ್ನತೆಗೆ ಒಳಗಾಗುತ್ತಾರೆ. ಪ್ರೋತ್ಸಾಹಿಸಿದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ ಎಂದರು. ಕಲಬುರಗಿಯ ಭಾರತೀಯ ಆಡಳಿತ ಸೇವೆ ಸಾಧಕ ರಾಜೇಶ ರಾಠೊಡ ಮಾತನಾಡಿ, ಲೋಕಸೇವಾ ಆಯೋಗದ ಸ್ಪರ್ಧಾತ್ಮಕ
ಪರೀಕ್ಷೆಯಲ್ಲಿ 6ರಿಂದ 12ನೇ ತರಗತಿಯ ವಿಷಯಗಳ ಆಧಾರದ ಮೇಲೆ ಪ್ರಶ್ನೆಗಳಿರುತ್ತವೆ. ವಿದ್ಯಾರ್ಥಿಗಳು 6ರಿಂದ 12ನೇ ತರಗತಿಯ ವಿಷಯವನ್ನು ಚೆನ್ನಾಗಿ ಓದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಾಗುತ್ತವೆ. ಭಾರತೀಯ ಆಡಳಿತ ಸೇವೆ ಪರೀಕ್ಷೆಗೆ ತಯಾರಿ ಮಾಡುವವರು ದಿನಕ್ಕೆ ಸುಮಾರು 8 ರಿಂದ 10 ಗಂಟೆಗಳ ಅಭ್ಯಾಸ ಮಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.
Related Articles
ಆದವರಿಗೆ ನೇರವಾಗಿ ಸಮಾಜ ಸೇವೆ ಮಾಡುವ ಸದಾವಕಾಶ ದೊರೆಯುತ್ತದೆ. ಸರ್ಕಾರಿ ಕೆಲಸ ಮಾಡಲು ಅವಕಾಶ ಸಿಕ್ಕಾಗ ನಿಸ್ವಾರ್ಥತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
Advertisement
ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಪ್ರೊಬೇಷನರಿ ಐಎಎಸ್ ಅಧಿಕಾರಿಗಳಾದ ಅನಿಲ್ ಕಮಲ್ ಅತುಲ್, ಪಲ್ಲವಿ ಮತ್ತಿತರರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ನಾಗರಿಕಸೇವಾ ಪರೀಕ್ಷಾ ಸಾಧಕರೊಂದಿಗೆ ಸಂವಾದ ನಡೆಯಿತು. ಕಥೆ-ಕಾದಂಬರಿ ಓದಲು ಪ್ರೋತ್ಸಾಹಿಸಿ
ನಾವು ಮಾಡುವ ಕೆಲಸದಿಂದ ನಮ್ಮ ಹುದ್ದೆಗೆ ಗೌರವ ದೊರೆಯುವಂತೆ ಆಗಬೇಕು. ಸಮಾಜದಲ್ಲಿ ಕಡೆಗಣಿಸಿದವರಿಗೆ ಸಹಾಯ ಮಾಡಿ ಅವರ ಏಳ್ಗೆಗೆ ಪ್ರಯತ್ನಿಸಬೇಕು. ಸಮಾಜದಲ್ಲಿ ಮತ್ತು ಪ್ರಪಂಚದಲ್ಲಿ ವಿದ್ಯೆಯಿಂದ ಗೌರವ ದೊರೆಯುತ್ತದೆ. ವಿದ್ಯೆಯ ಜೊತೆಗೆ ಸಂಸ್ಕಾರ ಹಾಗೂ ಮಾನವೀಯತೆ ಬೆಳೆಸಿಕೊಳ್ಳಬೇಕಾದರೆ ಮಕ್ಕಳಿಗೆ ಪುಸ್ತಕ, ಕಥೆ, ಕಾದಂಬರಿಗಳನ್ನು ಓದಲು ಪ್ರೋತ್ಸಾಹಿಸಬೇಕು.
ಅಲೋಕ ಕುಮಾರ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ