ದಾವಣಗೆರೆ: ಪರಸ್ಪರ ಪ್ರೀತಿಸುತ್ತಿದ್ದ ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕಾಧಿಕಾರಿ ಎಸ್. ಅಶ್ವತಿ ಕೇರಳದ ಕಲ್ಲಿಕೋಟೆಯಲ್ಲಿ ಪ್ರೇಮಿಗಳ ದಿನದಂದೇ (ಫೆ.14) ವಿವಾಹ ಬಂಧನಕ್ಕೊಳಗಾಗಿದ್ದಾರೆ.
ಕಲ್ಲಿಕೋಟೆಯ ಕೋಯಿಕ್ಕೋಡ್ ಟಾಗೋರ್ ಹಾಲ್‌ನಲ್ಲಿ ಗುರುವಾರ ಬೆಳಗ್ಗೆವರ ಡಾ. ಬಗಾದಿ ಗೌತಮ್ ಬಿಳಿ ಶರ್ಟ್-ಪಂಚೆ ಧರಿಸಿ, ಹೆಗಲ ಮೇಲೆ ಶಲ್ಯ ಹಾಕಿಕೊಂಡಿದ್ದರೆ, ವಧು ಎಸ್.ಅಶ್ವತಿ ಕೆನೆಬಿಳುಪು ರೇಷ್ಮೆ ಸೀರೆ, ಕೆಂಪು ರವಿಕೆ, ಚಿನ್ನಾಭರಣ ಧರಿಸಿದ್ದರು. ಕೇರಳದ ಸಂಪ್ರದಾಯದಂತೆ ನಡೆದ ವಿವಾಹ ಮಹೋತ್ಸ ವದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಈ ವಿವಾಹಕ್ಕೆ ಉಭಯ ಕುಟುಂಬದ ಸಂಬಂ ಧಿ ಕರು, ಆಪ್ತರು, ಸ್ನೇಹಿತರು, ಅಧಿಕಾರಿಗಳು ಸಾಕ್ಷಿಯಾದರು.
ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂ (ವೈಜಾಗ್)ನ ಡಾ| ಬಗಾದಿ ಗೌತಮ್, ಕಾಕಿನಾಡಿನ ರಂಗರಾಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಮುಗಿಸಿ, ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದವರು.
2009ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅವರು ಬೆಳಗಾವಿ ಜಿಪಂ ಸಿಇಒ,ರಾಯ ಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 4 ತಿಂಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕೇರಳದ ಕಲ್ಲಿಕೋಟೆ ನಿವಾಸಿ ಎಸ್. ಅಶ್ವತಿ 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಮಣಿಪಾಲ್‌ನಲ್ಲಿ ಎಂಬಿಎ ಮುಗಿಸಿದ ನಂತರ ಐಎಎಸ್ ಪರೀಕ್ಷೆ ಬರೆದಿ ದ್ದರು. ಕಳೆದ ಒಂದೂವರೆ ವರ್ಷದಿಂದ ದಾವಣಗೆರೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.