Advertisement

IAS officer ದಿವ್ಯಾಂಗರಿಗೇಕೆ ಮೀಸಲಾತಿ?: ಐಎಎಸ್‌ ಅಧಿಕಾರಿ ಟ್ವೀಟ್‌ಗೆ ಭಾರೀ ಆಕ್ರೋಶ

09:13 PM Jul 22, 2024 | Team Udayavani |

ನವದೆಹಲಿ: ನಾಗರಿಕ ಸೇವೆಯಲ್ಲಿ ದಿವ್ಯಾಂಗರಿಗೆ ಮೀಸಲಾತಿಯ ಅಗತ್ಯವಿದೆಯೇ ಎಂದು ಪ್ರಶ್ನಿಸಿ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

Advertisement

ತೆಲಂಗಾಣದ ಹಣಕಾಸು ಆಯೋಗದಲ್ಲಿ ಸದಸ್ಯರಾಗಿರುವ ಸ್ಮಿತಾ ಸಬರ್ವಾಲ್‌, “ವಿಕಲಚೇತನರನ್ನು ನಾನು ಗೌರವಿಸುತ್ತೇನೆ. ಆದರೆ ನಿಮ್ಮ ಪೈಲಟ್‌, ಡಾಕ್ಟರ್‌ ದಿವ್ಯಾಂಗರಾದರೆ ನೀವು ಒಪ್ಪುತ್ತೀರಾ? ಅಂತೆಯೇ ನಾಗರಿಕ ಸೇವೆ ಹೆಚ್ಚು ಶ್ರಮ ಬೇಡುತ್ತದೆ, ಜನರಿರುವ ಸ್ಥಳಗಳಿಗೆ ತೆರಳಿ ಅವರ ಸಮಸ್ಯೆ ಆಲಿಸಬೇಕಾಗುತ್ತದೆ. ಆದ್ದರಿಂದ ಅವರಿಗೆ ಮೀಸಲಾತಿ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದ್ದು, ಅಂಗವಿಕಲತೆಗೂ ಬೌದ್ಧಿಕ ಸಾಮರ್ಥ್ಯಕ್ಕೂ ಏನು ಸಂಬಂಧ ಎಂದು ಹಲವರು ಪ್ರಶ್ನಿಸಿದ್ದಾರೆ. ಪ್ರೊಬೆಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧದ ಮೀಸಲಾತಿ ಅಕ್ರಮದ ಪ್ರಕರಣ ಹಸಿಯಾಗಿರುವಾಗಲೇ ಈ ಚರ್ಚೆ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next