Advertisement

ಸಸಿಕಾಂತ್ ಸೆಂಥಿಲ್ ಇಲ್ಲೆ ಇದ್ದು ದೇಶ ಒಡೆಯುವ ಬದಲು ಪಾಕ್ ಗೆ ಹೋಗಲಿ: ಸಂಸದ ಹೆಗಡೆ

10:29 AM Sep 10, 2019 | Mithun PG |

ಬೆಂಗಳೂರು: ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಇಲ್ಲೆ ಇದ್ದು ದೇಶ ಒಡೆಯುವ ಬದಲು  ಪಾಕ್ ಗೆ ಹೋಗಿ ನಮ್ಮ ದೇಶದ ವಿರುದ್ದ ಹೋರಾಟ ಮಾಡಲಿ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕಿಡಿಕಾರಿದ್ದಾರೆ.

Advertisement

ಐಎಎಸ್ ಅಧಿಕಾರಿ ರಾಜೀನಾಮೆ  ವಿಚಾರವಾಗಿ ಸರಣಿ ಟ್ವೀಟ್ ಮಾಡಿದ ಅವರು, ಸಸಿಕಾಂತ್ ಸೆಂಥಿಲ್ ಮೊದಲು ಮಾಡಬೇಕಾದ ಕೆಲಸವೇನೆಂದರೆ, ತನ್ನ ನಿಲುವು ಬೆಂಬಲಿಸಿದವರ ಜೊತೆಗೆ ಪಾಕ್ ಗೆ ವಲಸೆ ಹೋಗಲಿ, ಇದು ಪ್ರಾಯೋಗಿಕವಾಗಿ ಸುಲಭ ಮತ್ತು ಅಂತಿಮ ಪರಿಹಾರ.

ಇಲ್ಲಿಯೇ ಇದ್ದು ನಮ್ಮ ದೇಶದ ವಿರುದ್ಧ ಅಸಹನೆ ವ್ಯಕ್ತಪಡಿಸುವುದರ ಬದಲು ಪಾಕಿಸ್ತಾನ ಕ್ಕೆ ಹೋಗಿ ನಮ್ಮ  ದೇಶದ ವಿರುದ್ಧ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ಅವರು ತಮ್ಮ ನಿಯತ್ತು ತೋರಿಸಲಿ ಎಂದು ಹರಿಹಾಯ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಹುದ್ದೆಗೆ ಶುಕ್ರವಾರ ದಿಢೀರ್ ರಾಜಿನಾಮೆ  ಸಲ್ಲಿಸಿದ್ದರು. ತಮಿಳುನಾಡಡು ಮೂಲದ ಸೆಂಥಿಲ್ 2009 ರ ಬ್ಯಾಚ್ ನ ಐಎಎಸ್ ಅಧಿಕಾರಿ. 2009 ಮತ್ತು 2012ರ ಅವಧಿಯಲ್ಲಿ ಬಳ್ಳಾರಿಯಲ್ಲಿ ಸಹಾಯಕ  ಆಯುಕ್ತರಾಗಿ ಕೆಲಸ ಮಾಡಿದ್ದರು. ಬಳಿಕ ಎರಡು ಅವಧಿಗೆ ಶಿವಮೊಗ್ಗ ಜಿ. ಪಂ. ಸಿಇಓ ಆಗಿದ್ದರು. ಅನಂತರದ ವರ್ಷಗಳಲ್ಲಿ ಚಿತ್ರದುರ್ಗ ಮತ್ತು ರಾಯಾಚೂರು ಜಿಲ್ಲಾಧಿಕಾರಿಯಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿ 2016ರ ತನಕ ಸೇವೆ ಸಲ್ಲಿಸಿದ್ದರು.

Advertisement

ದ. ಕ ಜಿಲ್ಲೆಯಲ್ಲಿ 23 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಅಕ್ರಮ ಮರಳುಗಾರಿಕೆ ಮತ್ತು ದನ ಕಳ್ಳಸಾಗಟ ತಡೆಯಲು ಅ್ಯಪ್ ಆಧಾರಿತ ಸೇವೆಯನ್ನು ಪರಿಚಯಿಸಿದ್ದರು. ಬೆಳ್ತಂಗಡಿ ತಾಲೂಕು ಪ್ರವಾಹ ಪೀಡಿತವಾದಾಗ ಪರಿಹಾರ ಕಾರ್ಯಕ್ಕಾಗಿ ಶ್ರಮಿಸಿದ್ದರು. ದಕ್ಷ ಅಧಿಕಾರಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

ವೈಯಕ್ತಿಕ ಕಾರಣ: ತಮ್ಮ ರಾಜೀನಾಮೆಗೆ ವ್ಯೆಯಕ್ತಿಕ ಕಾರಣ ಎಂದು ತಿಳಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಂಡು ನಾನು ಸರಕಾರದ ನಾಗರಿಕ ಸೇವೆಯಲ್ಲಿ ಮುಂದುವರಿಯುವುದು ನೈತಿಕವಾಗಿ ಸೂಕ್ತವಲ್ಲ ಎಂದು ಭಾವಿಸಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಮುಂಬರುವ ದಿನಗಳಲ್ಲಿ ದೇಶದ ಮೂಲ ಚೌಕಟ್ಟು ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಈ ಸಂದರ್ಭದಲ್ಲಿ ಜನರ ಜೀವನ ಹಸನುಗೊಳಿಸುವ ಸೇವೆ ಮಾಡುವುದು ಸೂಕ್ತ ಎಂದು ಭಾವಿಸಿದ್ದೇನೆ ಎಂಬ ಮಾತನ್ನು ರಾಜೀನಾಮೆ ಸಂದರ್ಭದಲ್ಲಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next