ಹೀಗಾಗಿ ಅವರು 10 ತಿಂಗಳಿನಿಂದ ನಾಪತ್ತೆಯಾಗಿದ್ದು, ಎಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Advertisement
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಶ್ಮಿ ಮಹೇಶ್ ತಾವು ಕೆಲಸ ಮಾಡಿದ ಇಲಾಖೆಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದರು. ಈ ಕಾರಣಕ್ಕೆ ಪದೇಪದೆ ಅವರನ್ನು ವರ್ಗಾವಣೆ ಮಾಡಲಾಗುತ್ತಿತ್ತು. ಇದರಿಂದ ಬೇಸತ್ತಿದ್ದ ರಶ್ಮಿ ಮಹೇಶ್ 2017ರ ಏಪ್ರಿಲ್ 16ರಿಂದ ರಜೆ ಮೇಲಿದ್ದಾರೆ. ಅವರ ಸ್ನೇಹಿತರು ಮಾತ್ರವಲ್ಲದೆ ನಾನು ಕೂಡ ಸಂಪರ್ಕಕ್ಕೆ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಮತ್ತು ಅವರು ಎಲ್ಲಿ ಹೋಗಿದ್ದಾರೆ ಎಂಬುದನ್ನು ಪತ್ತೆಹಚ್ಚಲೂ ಸಾಧ್ಯವಾಗಿಲ್ಲ. ಆದ್ದರಿಂದ ಅವರಿಗೆ ಏನಾಗಿದೆ? ಏಕೆ ಯಾರಿಗೂ ಸಿಗುತ್ತಿಲ್ಲ? ಯಾರು ಅಡಗಿಸಿಟ್ಟಿದ್ದಾರೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರ ಪತ್ತೆಹಚ್ಚಿ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ಅಧಿಕಾರಿಗಳ ಮೇಲೆ ಹಲ್ಲೆ, ಕೊಲೆ ಯತ್ನ ಪ್ರಕರಣಗಳೂ ನಡೆದಿವೆ. ಆದರೆ, ಸರ್ಕಾರ ಅಂತಹ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆಯೇ ವಿನಃ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಪ್ರಾಮಾಣಿಕ ಐಎಎಸ್ ಅಧಿಕಾರಿ ವಿಜಯಕುಮಾರ್ ಅವರು ನಿವೃತ್ತಿಯಾಗಲು 2 ತಿಂಗಳಿರುವಾಗ ಅವರನ್ನು ಕಡ್ಡಾಯ ನಿವೃತ್ತಿ ಪಡೆಯುವಂತೆ ಮಾಡಲಾಗಿದೆ. ಕೆಎಎಸ್ ಅಧಿಕಾರಿ
ಮಥಾಯಿ ಅವರಿಗೆ ಸರಿಯಾಗಿ ವೇತನವನ್ನೂ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು. ಬೇಸತ್ತು ರಜೆ ಮೇಲೆ ಹೋಗಿದ್ದಾರೆ
ಐಎಎಸ್ ಅಧಿಕಾರಿ ರಶ್ಮಿ ಮಹೇಶ್ 2017ರ ಜು.16ರಿಂದ ರಜೆ ಮೇಲೆ ಇರುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ
ಇಲಾಖೆ ಖಚಿತ ಪಡಿಸಿದೆ. 2017ರ ಜುಲೈ ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯನ್ನೂ ಅವರು ಸಂಪರ್ಕಿಸಿಲ್ಲ
ಎನ್ನಲಾಗಿದೆ. ಈ ಕುರಿತು ಅವರನ್ನು ಉದಯವಾಣಿ ಸಂಪರ್ಕಿಸಲು ಪ್ರಯತ್ನಿಸಿದರಾದರೂ ಸಂಪರ್ಕಕ್ಕೆ ಸಿಗಲಿಲ್ಲ. ಇಲಾಖೆಯ
ವೆಬ್‌ಸೈಟ್‌ನಲ್ಲಿ ಕೂಡ ರಜೆಯ ಮೇಲಿದ್ದಾರೆ ಎಂದು ನಮೂದಾಗಿದೆ. ರಜೆ ತೆಗೆದುಕೊಳ್ಳಲು ಕಾರಣ ಸ್ಪಷ್ಟವಾಗಿಲ್ಲವಾದರೂ,
ಹಲವು ಬಾರಿ ಮೇಲಿಂದ ಮೇಲೆ ವರ್ಗವಣೆ ಆಗಿರುವುದರಿಂದಲೇ ರಜೆ ಹಾಕಿದ್ದರೆ ಎನ್ನಲಾಗಿದೆ.
Related Articles
ಬಹಿರಂಗಪಡಿಸಿದ್ದರು. ನಂತರ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿ ಖಾಸಗಿ ವೈದ್ಯಕೀಯ ಮತ್ತು ದಂತ
ವೈದ್ಯಕೀಯ ಕಾಲೇಜುಗಳ ಮೇಲೆ ತಿರುಗಿಬಿದ್ದಿದ್ದರು. ಈ ಕಾರಣಕ್ಕಾಗಿ ಅವರನ್ನು ರಜೆ ಮೇಲೆ ಕಳುಹಿಸಿ ನಂತರ ಮೈಸೂರಿನ ಆಡಳಿತ ಮತ್ತು ತರಬೇತಿ ಕೇಂದ್ರದ ಆಯಕ್ತರಾಗಿ ವರ್ಗ ಮಾಡಲಾಗಿತ್ತು. ಅಲ್ಲಿಯೂ ತರಬೇತಿ ಕೇಂದ್ರದಲ್ಲಿ ಸುಮಾರು 100 ಕೋಟಿ ರೂ. ಹಗರಣ ಬೆಳಕಿಗೆ ತಂದಿದ್ದರು. ಈ ಕಾರಣಕ್ಕಾಗಿ ಅವರ ಮೇಲೆ ಹಲ್ಲೆಯೂ ನಡೆದಿತ್ತು. ಅದಾದ ಬಳಿಕ ಅವರನ್ನು ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸಲಾಯಿತು. ಕೆಲವೇ ದಿನಗಳಲ್ಲಿ ಬಿಬಿಎಂಪಿ ಹಣಕಾಸು ಮತ್ತು ಜಾಹೀರಾತು ವಿಭಾಗದ ಮುಖ್ಯಾಧಿಕಾರಿಯಾಗಿ ಮತ್ತೆ ವರ್ಗ ಮಾಡಲಾಗಿತ್ತು.
Advertisement
ಅಧಿಕಾರಿಗಳಿಗೆ ಸ್ವಾತಂತ್ರ್ಯವಿಲ್ಲಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಯಾರಧ್ದೋ ಹಿಡಿತ ಹಾಗೂ ಮರ್ಜಿಯಲ್ಲಿ ಕೆಲಸ
ಮಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ. ಅಧಿಕಾರಿಗಳು
ಮುಖ್ಯಮಂತ್ರಿಯ ಹಿಡಿತದಲ್ಲಿಯೂ ಇಲ್ಲ. ಬೇರೆ ವ್ಯಕ್ತಿಯ ಅಣತಿ ಪ್ರಕಾರ ಕೆಲಸ ಮಾಡುವಂತಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಚೇತರಿಕೆ: ಸುದ್ದಿಗಾರರ ಜತೆ ಮಾತನಾಡಿದ ಮಲ್ಯ ಆಸ್ಪತ್ರೆ ವೈದ್ಯ ಡಾ.ದಿವಾಕರ ಶೆಟ್ಟಿ, ನ್ಯಾ. ವಿಶ್ವನಾಥ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಬುಧವಾರ ವಿಶ್ವನಾಥ ಶೆಟ್ಟಿ ಅವರನ್ನು ಆಸ್ಪತ್ರೆಯಿಂದ ಕಳುಹಿಸಲಾಗುವುದು. ಸಂಪೂರ್ಣ
ಗುಣಮುಖರಾಗಲು ಒಂದು ತಿಂಗಳ ಕಾಲಾವಕಾಶ ಬೇಕೆಂದು ತಿಳಿಸಿದರು. ಮುಖ್ಯಮಂತ್ರಿಗೆ ಸಿಕ್ಕ ಬಹುಮಾನವೇನು?
ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ಗೆ ಜೈಲಿನಲ್ಲಿ ಸೌಲಭ್ಯ ಒದಗಿಸಿದ್ದಕ್ಕೆ ಏನು ಬಹುಮಾನ ಸಿಕ್ಕಿದೆ ಎಂಬುದನ್ನು ಬಹಿ ರಂಗಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. ಶಶಿಕಲಾಗೆ ಸೌಲಭ್ಯ ಗಳನ್ನು ಕಲ್ಪಿಸುವಂತೆ ಮುಖ್ಯಮಂತ್ರಿಗಳೇ ಆದೇಶಿಸಿದ್ದರು ಎಂದು ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್, ವಿಚಾರಣಾ ಸಮಿತಿಗೆ ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಸರ್ಕಾರ ಆದೇಶ ಹೊರಡಿಸಿ ಸತ್ಯನಾರಾಯಣ ರಾವ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಇದರಿಂದ ಸಿದ್ದರಾಮಯ್ಯ ಸತ್ಯ ಹೇಳಿದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದು
ಸಾಬೀತಾಗಿದೆ ಎಂದರು.