Advertisement

“ಆತ್ಮನಿರ್ಭರ’ದಡಿ 114 ಫೈಟರ್‌ ಜೆಟ್‌ ತಯಾರಿಕೆ

05:45 PM Jun 13, 2022 | Team Udayavani |

ಹೊಸದಿಲ್ಲಿ: ಯುದ್ಧ ಸಾಮಗ್ರಿಗಳ ತಯಾರಿಕೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರಕಾರ, “ಮೇಕ್‌ ಇನ್‌ ಇಂಡಿಯಾ’ ಯೋಜನೆಯ “ಬೈ ಗ್ಲೋಬಲ್‌ ಆ್ಯಂಡ್‌ ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯಡಿ, 114 ಫೈಟರ್‌ ಜೆಟ್‌ ವಿಮಾನಗಳನ್ನು ಸ್ವದೇಶಿ-ವಿದೇಶಿ ಕಂಪೆನಿಗಳ ಜಂಟಿ ಸಹಭಾಗಿತ್ವದಲ್ಲಿ ತಯಾರಿಸಲು ತೀರ್ಮಾನಿಸಿದೆ.

Advertisement

96 ವಿಮಾನ ನಮ್ಮಲ್ಲೇ ತಯಾರು
ಮಲ್ಟಿರೋಲ್‌ ಫೈಟರ್‌ ಏರ್‌ಕ್ರಾಫ್ಟ್ (ಎಂಆರ್‌ಎಫ್ಎ) ಮಾದರಿಯ 114 ವಿಮಾನಗಳಲ್ಲಿ 96 ವಿಮಾನಗಳನ್ನು ಭಾರತದಲ್ಲಿ ಹಾಗೂ ಉಳಿದ 18 ವಿಮಾನಗಳನ್ನು ಈ ಒಪ್ಪಂದದಲ್ಲಿ ಭಾಗಿಯಾಗುವ ಕಂಪೆನಿಗಳು ತಮ್ಮ ದೇಶಗಳಲ್ಲಿ ತಯಾರಿಸಲು ಅವಕಾಶ ನೀಡಲಾಗುತ್ತದೆ.

ಮೊದಲ ಸುತ್ತಿನ ಮಾತುಕತೆ ಪೂರ್ಣ
ಈ ಕುರಿತಂತೆ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ವಿವಿಧ ದೇಶಗಳ ಫೈಟರ್‌ ಜೆಟ್‌ ತಯಾರಿಕ ಕಂಪೆನಿಗಳ ಪ್ರತಿನಿಧಿಗಳ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಆ ವೇಳೆ, ಭಾರತವು ಯುದ್ಧ ಸಲಕರಣೆಗಳ ತಯಾರಿಕೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿಯನ್ನು ಹೊಂದಿರುವ ವಿಚಾರವನ್ನು ಕಂಪೆನಿಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next