Advertisement

ಸುಧಾರಿತ ಸ್ಪೈಸ್‌ ಖರೀದಿಗೆ ಐಎಎಫ್ ಚಿಂತನೆ

05:46 AM May 09, 2019 | mahesh |

ಹೊಸದಿಲ್ಲಿ: ವಾಯು ದಾಳಿಗಳಲ್ಲಿ ಬಳಸಲಾಗುವ ಸ್ಪೈಸ್‌-2000 ಬಾಂಬ್‌ಗಳ ಆಧುನಿಕ ಮಾದರಿಗಳನ್ನು ಇಸ್ರೇಲ್ನಿಂದ ಖರೀದಿಸಲು ಭಾರತೀಯ ವಾಯುಪಡೆ (ಐಎಎಫ್) ಚಿಂತನೆ ನಡೆಸಿದೆ. ಶತ್ರುಗಳ ಕಟ್ಟಡಗಳನ್ನು, ಬಂಕರ್‌ಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡಲು ಬಳಕೆಯಾಗುವ ಈ ಬಾಂಬ್‌ಗಳ ಹಳೆಯ ಮಾದರಿಯನ್ನು ಐಎಎಫ್ ಹೊಂದಿದೆ. ಇತ್ತೀಚೆಗೆ, ಪಾಕಿಸ್ಥಾನದ ಬಾಲಕೋಟ್‌ನಲ್ಲಿದ್ದ ಜೈಶ್‌-ಎ-ಮೊಹಮ್ಮದ್‌ ತರಬೇತಿ ಕೇಂದ್ರದಲ್ಲಿ ಮೇಲೆ ನಡೆಸಲಾದ ದಾಳಿಯ ವೇಳೆ ಇದೇ ಮಾದರಿಯ ಬಾಂಬ್‌ಗಳನ್ನು ಬಳಸಲಾಗಿತ್ತು. ಈಗ, ಅವಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುವ, ಕಟ್ಟಡಗಳನ್ನು ಮಾತ್ರವಲ್ಲದೆ, ಬಂಕರ್‌ಗಳು, ಟ್ಯಾಂಕರ್‌ಗಳನ್ನೂ ಧ್ವಂಸಗೊಳಿಸುವಂಥ ಆಧುನಿಕ ಸ್ಪೈಸ್‌-2000 ಬಾಂಬ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

Advertisement

ಶಸ್ತ್ರಾಸ್ತ್ರಗಳ ಖರೀದಿ ಹೇಗೆ?
ಭಾರತೀಯ ಸೇನೆಯ ಮೂರೂ ವಿಭಾಗಗಳಿಗೆ (ಭೂ ಸೇನೆ, ವಾಯು ಪಡೆ, ನೌಕಾ ಪಡೆ) ತುರ್ತು ಸಂದರ್ಭಗಳಲ್ಲಿ ವಿಶೇಷ ಶಸ್ತ್ರಾಸ್ತ್ರಗಳನ್ನು ಖರೀದಿಸುವ ವಿಶೇಷ ಅಧಿಕಾರ ಇರುತ್ತದೆ. ಇದಕ್ಕಾಗಿ 300 ಕೋಟಿ ರೂ. ಮೀಸಲು ಇರಿಸಲಾಗುತ್ತದೆ. ಅದರ ಅಡಿಯಲ್ಲೇ ಸುಧಾರಿತ ಬಾಂಬ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಏನು ವಿಶೇಷ?
•60 ಕಿ.ಮೀ. ದೂರ ಸಾಗುವ ಕ್ಷಮತೆ

•ದಾಳಿ ನಡೆಸುವ ಜಾಗದ ಮಾಹಿತಿ ಸಂರಕ್ಷಿಸಲು ಬಾಂಬ್‌ನಲ್ಲೇ ಕಂಪ್ಯೂಟರ್‌ ಮೆಮೊರಿ ವ್ಯವಸ್ಥೆ
•ಮೆಮೊರಿಯಲ್ಲಿನಲ್ಲಿನ ದತ್ತಾಂಶ ಹಾಗೂ ಗುರಿಯ ಫೋಟೋಗಳನ್ನು ಅವಲೋಕಿಸಿ ದಾಳಿ ನಡೆಸುವ ಛಾತಿ
•ಗುರಿ ಇರುವ ದಿಕ್ಕಿನ ಕಡೆಗೆ ತನ್ನನ್ನು ತಾನೇ ನಿರ್ದೇಶಿಸಿಕೊಂಡು ಸಾಗುವ ತಂತ್ರಗಾರಿಕೆ
•ಶಕ್ತಿಶಾಲಿ ಬಾಂಬ್‌ಗಳಾದ ಎಂಕೆ-84, ಬಿಎಲ್ಯು-109, ಎಪಿಡಬ್ಲ್ಯೂ ಹಾಗೂ ಆರ್‌ಎಪಿ- 2000 ಹೊತ್ತೂಯ್ಯುವ ಸಾಮರ್ಥ್ಯ

Advertisement

Udayavani is now on Telegram. Click here to join our channel and stay updated with the latest news.

Next