Advertisement

ಬಿಹಾರ : ಗುಂಡೆಸೆದು ಐಎಎಫ್ ಟೆಕ್ನೀಶಿಯನ್‌ ಹತ್ಯೆ

11:57 AM May 26, 2018 | Team Udayavani |

ಬಿಹಾರ್‌ ಷರೀಫ್, ಬಿಹಾರ : ಬಿಹಾರದ ನಲಂದಾ ಜಿಲ್ಲೆಯಲ್ಲಿ  ಭಾರತೀಯ ವಾಯು ಪಡೆಯ ಟೆಕ್ನೀಶಿಯನ್‌ ಓರ್ವರನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈ ಘಟನೆ ಬಸ್ವನ್‌ಬಿಗಾ ಗ್ರಾಮದಲ್ಲಿ ನಡೆದಿದೆ. ಐಎಎಫ್ ನೌಕರನಾಗಿರುವ 25ರ ಹರೆಯದ ಸುದಯ್‌ ಯಾದವ್‌ ಎಂಬಾತನನ್ನು ಕರ್ನಾಟಕದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆತ ರಜೆಯಲ್ಲಿ ತನ್ನ ಊರಿಗೆ ಬಂದಿದ್ದ. 

ಆರವಿಂದ ಯಾದವ್‌ ಎಂಬಾತ ತನ್ನ ಮೂವರು ಸಹಚರರೊಂದಿಗೆ ಗುರುವಾರ ರಾತ್ರಿ ಸುದಯ್‌ನ ಮನೆಗೆ ತೆರಳಿ ಆತನ ಮೇಲೆ ಗುಂಡೆಸೆದು ತೀವ್ರ ಮಾರಣಾಂತಿಕ ದಾಳಿ ನಡೆಸಿದ. ಸುದಯ್‌ನನ್ನು ಒಡನೆಯೇ ಸದರ್‌ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿಂದ ಆತನನ್ನು ಪಟ್ನಾ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿಗೆ ತಲುಪುವ ಮೊದಲೇ ಆತ ಮಾರ್ಗ ಮಧ್ಯೆ ಕೊನೆಯುಸಿರೆಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹಂತಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವರೆಗೆ ಯಾರನ್ನೂ ಬಂಧಿಸಲಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next