Advertisement

ಚೀನಾ ಗಡಿಯಲ್ಲಿ ವಾಯುಪಡೆಯ ಸುಖೋಯ್‌-30 ಯುದ್ಧ ವಿಮಾನ ನಾಪತ್ತೆ

03:10 PM May 23, 2017 | |

ತೇಜ್‌ಪುರ್‌: ಇಲ್ಲಿನ ತೇಜ್‌ಪುರ್‌ ವಾಯುನೆಲೆಯಿಂದ ಹಾರಾಟ ಆರಂಭಿಸಿದ್ದ ಸುಖೋಯ್‌-30 ಯುದ್ಧ ವಿಮಾನ ರಡಾರ್‌ ಸಂಪರ್ಕ ಕಳೆದುಕೊಂಡಿದೆ. 

Advertisement

ಮಧ್ಯಾಹ್ನ  ಹಾರಾಟ ಆರಂಭಿಸಿದ್ದ ವಿಮಾನ 60 ಕಿ.ಮೀ ದೂರ ಹಾರಾಟ ನಡೆಸಿದ ಬಳಿಕ ರಡಾರ್‌ ಸಂಪರ್ಕ ಕಳೆದುಕೊಂಡಿದೆ. 

ವಿಮಾನದಲ್ಲಿ ತರಬೇತಿ ಹಾರಾಟ ನಡೆಸಲಾಗುತ್ತಿದ್ದು, ಇಬ್ಬರು ಪೈಲಟ್‌ಗಳಿದ್ದರು ಎಂದು ವಾಯುಪಡೆ ತಿಳಿಸಿದೆ. 

ವಿಮಾನ ನಾಪತ್ತೆಯಾದ ಬಳಿಕ ವಾಯು ಸೇನೆಯಿಂದ ಹೆಲಿಕ್ಯಾಪ್ಟರ್‌ಗಳನ್ನು ಬಳಸಿಕೊಂಡು ತೀವ್ರ ಹುಡುಕಾಟ ನಡೆಸಲಾಗುತ್ತಿದೆ. 

ಸುಖೋಯ್‌ ಯುದ್ಧ ವಿಮಾನಗಳು ರಷ್ಯಾದಿಂದ ತರೆಸಿಕೊಳ್ಳಲಾದ ಅಂತ್ಯಂತ ಉನ್ನತ ಶ್ರೇಣಿಯ ಯುದ್ಧ ವಿಮಾನಗಳಾಗಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next