Advertisement

ಹೆಚ್ಚಿದ ಎದೆ ಬಡಿತ; ಕಿರುಚಾಡಿದ ಮಕ್ಕಳು

12:30 AM Feb 27, 2019 | |

“ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶೆಲ್‌ ದಾಳಿಯ ಸದ್ದು ನಮಗೆ ಹೊಸತಲ್ಲ. ಕದನ ವಿರಾಮ ಉಲ್ಲಂಘನೆ, ಗುಂಡಿನ ದಾಳಿ ಕೇಳಿ ಕೇಳಿ ಅಭ್ಯಾಸವಾಗಿಬಿಟ್ಟಿದೆ. ಆದರೆ, ಕಗ್ಗತ್ತಲ ನೀರವದಲ್ಲಿ ಯುದ್ಧ ವಿಮಾನಗಳು ಸಂಚರಿಸುವ ಶಬ್ದ ಕೇಳಿದ್ದು ಇದೇ ಮೊದಲು. ಆ ವಿಚಿತ್ರ ಧ್ವನಿ ಕಿವಿಗಪ್ಪಳಿಸುತ್ತಿದ್ದಂತೆ, ಎದೆಬಡಿತ ಹೆಚ್ಚಾಯಿತು. ಯುದ್ಧ ಶುರುವಾಗಿಯೇ ಬಿಟ್ಟಿತು ಎಂದು ಮನಸ್ಸು ಹೇಳಿತು. ಮಕ್ಕಳೆಲ್ಲ ಕಿಟಾರನೆ ಕಿರುಚುತ್ತಾ ಓಡಿ ಬಂದು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು.’

Advertisement

ಸೋಮವಾರ ತಡರಾತ್ರಿಯ ಸರ್ಜಿಕಲ್‌ ದಾಳಿಗೂ ಮುನ್ನ, ಯುದ್ಧ ವಿಮಾನಗಳು ಎಲ್‌ಒಸಿಯಲ್ಲಿ ಹಾದುಹೋದಾಗ ಆದ ಅನುಭವವನ್ನು ಗಡಿಗ್ರಾಮಸ್ಥ ನಿಸಾರ್‌ ಅಹ್ಮದ್‌ ಬಿಚ್ಚಿಟ್ಟ ಪರಿಯಿದು. ಸುಮಾರು 10 ನಿಮಿಷಗಳ ಕಾಲ ವಾಯುಪಡೆಯ ವಿಮಾನಗಳ ಸದ್ದು ಗಡಿ ಗ್ರಾಮಗಳಲ್ಲಿ ಅನುರಣಿಸುತ್ತಿತ್ತು ಎನ್ನುತ್ತಾರೆ ನಾಗರಿಕರು. ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದ ಗ್ರಾಮಸ್ಥರನ್ನು ದಿಢೀರೆಂದು ಎದ್ದು ಕುಳಿತುಕೊಳ್ಳುವಂತೆ ಮಾಡಿತ್ತು ಈ ವಿಮಾನಗಳು.

ಪುಲ್ವಾಮಾ ದಾಳಿ ಬಳಿಕ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಹಬ್ಬಿದ್ದರಿಂದ ಜನರಲ್ಲಿ ಮೊದಲೇ ಭಯ ಮನೆ ಮಾಡಿತ್ತು. ಬೆಳಗ್ಗೆ ಸೂರ್ಯೋದಯವನ್ನು ನೋಡುತ್ತೇವೋ, ಇಲ್ಲವೋ ಎಂಬ ಭೀತಿಯಿಂದಲೇ ಇವರು ರಾತ್ರಿ ಕಣ್ಣು ಮುಚ್ಚುತ್ತಿದ್ದರು. ಅಂಥದ್ದರಲ್ಲಿ ರಾತ್ರೋರಾತ್ರಿ ನಡೆದ ಈ ಬೆಳವಣಿಗೆ ಅವರ ಎದೆಬಡಿತವನ್ನು ಹೆಚ್ಚಿಸಿದ್ದು ಸುಳ್ಳಲ್ಲ. “ವಿಮಾನಗಳ ಸದ್ದು ಕಿವಿಗಪ್ಪಳಿಸುತ್ತಿದ್ದಂತೆ, ಮೂಗಿಗೆ ಯುದ್ಧದ ವಾಸನೆ ಬಡಿದಿತ್ತು. ಇನ್ನೇನು ಒಂದೆರಡು ಕ್ಷಣಗಳಲ್ಲಿ ನಮ್ಮ ಮೇಲೆ ಬಾಂಬ್‌ ಬಂದು ಬೀಳುತ್ತದೆಯೋ ಎಂಬ ಭೀತಿ ಕಣ್ಣಂಚಲ್ಲಿ ನೀರು ತರಿಸಿತ್ತು’ ಎನ್ನುತ್ತಾರೆ ಮತ್ತೂಬ್ಬ ಗ್ರಾಮಸ್ಥ. 

“ಒಟ್ಟಿನಲ್ಲಿ ನಿನ್ನೆ ರಾತ್ರಿಯ ವಿಚಿತ್ರ ಬೆಳವಣಿಗೆಯು ನಮ್ಮನ್ನು ಇನ್ನೂ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸುಳಿವಿದು. ರಾತ್ರಿಹೊತ್ತು ಯುದ್ಧ ವಿಮಾನಗಳು ಸಂಚರಿಸಿದ್ದನ್ನು ನಾವು ನೋಡಿದ್ದು ಇದೇ ಮೊದಲು. ಪರಿಸ್ಥಿತಿ ಬಿಗಡಾಯಿಸಿದರೆ ಸರ್ಕಾರವು ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಬಹುದು’ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ, ಅಂತಹ ಯಾವುದೇ ಸೂಚನೆ ಸರ್ಕಾರದ ಕಡೆಯಿಂದ ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಎಲ್‌ಒಸಿಯಲ್ಲಿ ಹೈ ಅಲರ್ಟ್‌: ರಾತ್ರಿ ನಡೆದ ಬೆಳವಣಿಗೆಯಿಂದ ಮುಂಜಾನೆ ಎಲ್‌ಒಸಿಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತ್ತಾದರೂ, ನಂತರ ಸಹಜ ಸ್ಥಿತಿಗೆ ತಲುಪಿದೆ. ಈ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಆದರೆ, ನಮ್ಮ ಸೇನಾಪಡೆ ಅಲರ್ಟ್‌ ಆಗಿದ್ದು, ಯಾವುದೇ ಸ್ಥಿತಿಯನ್ನೂ ಎದುರಿಸಲು ಸನ್ನದ್ಧವಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

Advertisement

ಕದನ ವಿರಾಮ ಉಲ್ಲಂಘನೆ: ಮಂಗಳವಾರ ಮುಂಜಾನೆಯೇ ಭಾರತೀಯ ವಾಯುಪಡೆಯಿಂದ “ಸಖತ್‌ ಶಾಕ್‌’ಗೆ ಒಳಗಾದ ಪಾಕಿಸ್ಥಾನಕದನ ವಿರಾಮ ಉಲ್ಲಂಘಿಸುವ ಮೂಲಕ ಮತ್ತೆ ಕಾಲ್ಕೆರೆದಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿಯಲ್ಲಿ ಸತತ 4ನೇ ದಿನವೂ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ನಮ್ಮ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದ್ದು, ಯಾವುದೇ ಸಾವು ನೋವು ವರದಿಯಾಗಿಲ್ಲ.

ಕಣಿವೆ ರಾಜ್ಯ ಉದ್ವಿಗ್ನ; ಮಡುಗಟ್ಟಿದ ಆತಂಕ, ಭೀತಿಯ ವಾತಾವರಣ ಪಾಕ್‌ ಉಗ್ರರ ಮೇಲೆ ಭಾರತ ನಡೆಸಿದ 2ನೇ ಸರ್ಜಿಕಲ್‌ ದಾಳಿಯ ಬಿಸಿ ಕಣಿವೆ ರಾಜ್ಯದಲ್ಲಿ ಗೋಚರಿಸತೊಡಗಿದೆ. ಬೆಳಗಾಗುತ್ತಿದ್ದಂತೆ ವಾಯುಪಡೆ ದಾಳಿಯ ಸುದ್ದಿ ರಾಜ್ಯಾದ್ಯಂತ ವ್ಯಾಪಿಸತೊಡಗಿದ್ದು, ಶ್ರೀನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನ ಗುಂಪು ಗುಂಪಾಗಿ ನಿಂತು, ಚರ್ಚೆಯಲ್ಲಿ ನಿರತವಾಗಿದ್ದು ಕಂಡುಬಂತು. ಜನರ ಆತಂಕವನ್ನು ಅರಿತ ಜಮ್ಮು-ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್‌. ಸುಬ್ರಹ್ಮಣ್ಯಂ ಅವರು ಕೂಡಲೇ ಪ್ರಕಟಣೆ ಹೊರಡಿಸಿ, “ಎಲ್ಲರೂ ಶಾಂತವಾಗಿರಿ. ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಯಾರೂ ನಂಬಬೇಡಿ. ನಿಮ್ಮ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿ ಏನೇ ವಿಚಾರ ಹೇಳುವುದಿದ್ದರೂ, ಸರ್ಕಾರ ನೇರವಾಗಿ ನಿಮಗೆ ಮಾಹಿತಿ ನೀಡುತ್ತದೆ’ ಎಂದು ಹೇಳಿದರು. “ಇದೆಲ್ಲ ಇಲ್ಲಿಗೇ ಮುಗಿದರೆ ಸಾಕು. ಪ್ರಚೋದನೆ ಮುಂದುವರಿದರೆ, ಗಡಿ ನಿಯಂತ್ರಣ ರೇಖೆಯ ಎರಡೂ ಕಡೆಯಲ್ಲಿರುವ ಜನರಿಗೆ ಸಮಸ್ಯೆ’ ಎಂದು ಈ ಹಿಂದೆ ಭಾರತ-ಪಾಕ್‌ ಯುದ್ಧಕ್ಕೆ ಸಾಕ್ಷಿಯಾಗಿದ್ದ 80 ವರ್ಷದ ಅಬ್ದುಲ್‌ ಗನಿ ದರ್‌ ಹೇಳುತ್ತಿದ್ದರು. 

ಐಎಎಫ್ ಮಾಹಿತಿಗಾಗಿ ಶೋಧ
ಪಾಕಿಸ್ತಾನದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಸುದ್ದಿಗಳು ಹರಿದಾಡುತ್ತಲೇ, ಅಂತರ್ಜಾಲದ ಖ್ಯಾತ ಸರ್ಚ್‌ ಇಂಜಿನ್‌ “ಗೂಗಲ್‌’ನಲ್ಲಿ ಪಾಕಿಸ್ತಾನದ ಪ್ರಜೆಗಳು ಭಾರತೀಯ ವಾಯುಪಡೆಯ ಬಗ್ಗೆ ತೀವ್ರ ಕುತೂಹಲದಿಂದ ಹುಡುಕಾಟ ನಡೆಸಿದ್ದಾರೆ. ಗೂಗಲ್‌ ಸಂಸ್ಥೆ ನಡೆಸಿರುವ ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನಿಗಳು “ಐnಛಜಿಚn ಅಜಿrfಟ್ಟcಛಿ’, “ಕಚkಜಿsಠಿಚn ಅಜಿr fಟ್ಟcಛಿ’ ಎಂಬ ಎರಡು ಪದಗಳನ್ನು ಟೈಪಿಸಿ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಇದರಲ್ಲಿ ಭಾರತೀಯ ವಾಯುಪಡೆಯ ಮಾಹಿತಿಗಾಗಿಯೇ ಹೆಚ್ಚು ಹುಡುಕಾಟ ನಡೆದಿರುವುದು ತಿಳಿದುಬಂದಿದೆ ಎಂದು “ಗೂಗಲ್‌ ಟ್ರೆಂಡ್ಸ್‌ ‘ ಹೇಳಿದೆ.

ಪುಲ್ವಾಮಾ ದಾಳಿ ನಡೆದು 12 ದಿನಗಳಲ್ಲಿ  ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರನ್ನು ಮಟ್ಟ ಹಾಕಲಾಗಿದೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ.  ಉಗ್ರರ ದಾಳಿಗೆ ಹುತಾತ್ಮರಾದವರ ಒಂದೊಂದು ತೊಟ್ಟು ರಕ್ತಕ್ಕೂ ಮೋದಿ ತಕ್ಕ ಉತ್ತರ ನೀಡುತ್ತಿದ್ದಾರೆ. ಪಾಕ್‌ ಪ್ರಧಾನಿ ಇದೀಗ ಶಾಂತಿ ಮಂತ್ರ ಪಠಿಸುತ್ತಿದ್ದಾರೆ. 
ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ 

ಉಗ್ರರ ಮೇಲೆ ಎಲ್ಲ ಸರ್ಕಾರಗಳು ದಾಳಿ ಮಾಡುತ್ತಲೇ ಬಂದಿವೆ. ದಿಸ್‌ ಇಜ್‌ ರೂಟಿನ್‌ ಪ್ರೊಸೆಸ್‌.  ಯುಪಿಎ ಸರ್ಕಾರದ ಅವಧಿಯಲ್ಲಿ ಆರು ಸಲ ದಾಳಿ ನಡೆಸಲಾಗಿತ್ತು.ಪಾಕ್‌ನಲ್ಲಿರುವ ಉಗ್ರರ ಮೇಲೆ ಸೇನೆ ತಕ್ಕ ಕಾರ್ಯಾಚರಣೆ ಮಾಡುತ್ತಿದೆ. ಇದಕ್ಕಾಗಿ ಭಾರತೀಯ ಸೇನೆಯನ್ನು ಅಭಿನಂದಿಸುವೆ.
ಡಾ| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಸಂಸದೀಯ ನಾಯಕ 

ಭಯೋತ್ಪಾದಕರ ಕ್ಯಾಂಪ್‌ಗ್ಳ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿರುವ ವಾಯಸೇನೆಯ ಯೋಧರಿಗೆ ನನ್ನ ಸೆಲ್ಯೂಟ್‌. ಅವರ ಸಾಹಸ ಮೆಚ್ಚತಕ್ಕ ವಿಚ, ತನ್ನ ನೆಲದಲ್ಲಿಯೇ ಉಗ್ರರಿಗೆ ಆಶ್ರಯ ಕಲ್ಪಿಸುವ ಪಾಕಿಸ್ತಾನಕ್ಕೆ ಭಾರಿ ದೊಡ್ಡ ಪಾಠ ಕಲಿಸಲಾಗಿದೆ. ಇದು ನಿಜಕ್ಕ
ದೊಡ್ಡ ಪಾಠ.

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಈ ಮೂಲಕ ಪಾಕಿಸ್ಥಾನಹಾಗೂ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ. ಉಗ್ರರ ದಾಳಿಯಿಂದ ನಮ್ಮ 40 ಯೋಧರನ್ನು ಕಳೆದುಕೊಂಡಿದ್ದೆವು. ಅದಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ದಾಳಿ ಮಾಡಿರುವುದು ಅತ್ಯಂತ ಸೂಕ್ತವಾಗಿದೆ.
ಡಾ.ಜಿ.ಪರಮೇಶ್ವರ್‌ ಉಪಮುಖ್ಯಮಂತ್ರಿ

ಪಾಕ್‌ ಉಗ್ರಗಾಮಿಗಳು ಪದೇ ಪದೆ ದಾಳಿ ಮಾಡುತ್ತಿದ್ದರು. ಈಗ ವಾಯು ಸೇನೆ ಉಗ್ರರ ನೆಲೆಯ ಮೇಲೆ ದಾಳಿ ಮಾಡಿದ್ದು, ಎಲ್ಲಾ ಯೋಧರು  ಅಭಿನಂದನಾರ್ಹರು. ಪಾಕಿಸ್ತಾನದ ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಹೋರಾಟ ಅನಿವಾರ್ಯ. ನೆರೆಯ ರಾಷ್ಟ್ರ ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. 
ದಿನೇಶ್‌ ಗುಂಡೂರಾವ್‌,ಕೆಪಿಸಿಸಿ ಅಧ್ಯಕ್ಷ

ಎಂಟು ದಿಕ್ಕಿನಲ್ಲಿ ಅಡಗಿದ್ದಾರೆ ಉಗ್ರರು
ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಒಳಗಿರುವ ಸಣ್ಣ ಮಟ್ಟದ 24ಕ್ಕೂ ಹೆಚ್ಚು ಉಗ್ರರ ಶಿಬಿರಗಳ ಹೊರತಾಗಿ ಅಲ್ಲಿ ಸಕ್ರಿಯವಾಗಿರುವ ಎಂಟು ಪ್ರಮುಖ ಉಗ್ರರ ತರಬೇತಿ ಶಿಬಿರಗಳ ಪಟ್ಟಿಯೊಂದನ್ನು ಭಾರತವು ಅಮೆರಿಕದ ಗುಪ್ತಚರ ವಿಭಾಗಕ್ಕೆ ಕಳುಹಿಸಿಕೊಟ್ಟಿದೆ. ಆ ಪಟ್ಟಿ ಇಂತಿದೆ.

01 ಮುಜಾಫ‌ರಾಬಾದ್‌ ಬಳಿ ಇರುವ ಲಷ್ಕರ್‌-ಎ-ತೊಯ್ಬಾದ ಧಾರ್ಮಿಕ ತರಬೇತಿ ಸಂಸ್ಥೆ
02 ಮನ್‌ಸೆಹ್ರಾ ಸಮೀಪ “ಬುಕದ್‌ ಬುಡ್‌’ ಎಂಬ ಜೈಶ್‌-ಎ-ಮೊಹಮ್ಮದ್‌ ಉಗ್ರರ ಶಿಬಿರ
03  ಮಂಗಳ ಬಳಿಯ ಗುಡ್ಡಗಳಲ್ಲಿನ ಹಿಜ್ಬುಲ್‌ ಮುಜಾಹಿದೀನ್‌ ಶಿಬಿರ   
04 ಶಿಂಕಾರಿ ಮತ್ತು ತಬೇìಲಾ ಸಮೀಪ ಎರಡು ಶಿಬಿರಗಳು
05 ಮನ್‌ಸೆಹ್ರಾ ಪರ್ವತ ಶ್ರೇಣಿ ಸಮೀಪ 200ಕ್ಕೂ ಹೆಚ್ಚು ಉಗ್ರರನ್ನು ಒಳಗೊಂಡ ಬೃಹತ್‌ ತರಬೇತಿ ಶಿಬಿರ
06 ಮನ್‌ಸೆಹ್ರಾದ ಸಫೈದಿಯಲ್ಲಿನ ತರಬೇತಿ ಶಿಬಿರಗಳುಮನ್‌ಸೆಹ್ರಾದಲ್ಲಿನ ಹಿಜ್ಬುಲ್‌ 
07 ಮುಜಾಹಿದೀನ್‌ ಶಿಬಿರ
08 ಹತ್ತಿಯಾನ್‌ ಬಾಲಾದ ಚಕೋಟಿಯಲ್ಲಿ ಲಷ್ಕರ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಶಿಬಿರಗಳು

Advertisement

Udayavani is now on Telegram. Click here to join our channel and stay updated with the latest news.

Next