ಡಿಸ್ಪುರ್: ಭಾರೀ ಮಳೆಯಿಂದಾಗಿ ರೈಲು ಸಿಕ್ಕಿಹಾಕಿಕೊಂಡ ನಂತರ ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆಯು ಸಿಲ್ಚಾರ್-ಗುವಾಹಟಿ ಎಕ್ಸ್‌ಪ್ರೆಸ್ ನ 119 ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಣೆ ಮಾಡಿದೆ.
ಸಿಲ್ಚಾರ್-ಗುವಾಹಟಿ ರೈಲು ಕ್ಯಾಚಾರ್ ಪ್ರದೇಶದಲ್ಲಿ ಸಿಲುಕಿಕೊಂಡಿತ್ತು. ಪ್ರವಾಹದ ನೀರಿನಿಂದ ರೈಲು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲು ಸಾಧ್ಯವಾಗಲಿಲ್ಲ. ಹಲವಾರು ಗಂಟೆಗಳ ಕಾಲ ರೈಲು ಸಿಕ್ಕಿಹಾಕಿಕೊಂಡ ನಂತರ, ಜಿಲ್ಲಾಡಳಿತವು ಭಾರತೀಯ ವಾಯುಪಡೆಯ ಸಹಾಯದಿಂದ 119 ಜನರನ್ನು ರಕ್ಷಿಸಿತು.
ಅಸ್ಸಾಂನಲ್ಲಿ ಹಠಾತ್ ಪ್ರವಾಹ ಮತ್ತು ಹಲವಾರು ಸ್ಥಳಗಳಲ್ಲಿ ಭಾರಿ ಭೂಕುಸಿತಗಳು ಸಂಭವಿಸಿದೆ. ರಾಜ್ಯದ ಇತರ ಭಾಗಗಳಿಂದ ರೈಲು ಮತ್ತು ರಸ್ತೆ ಸಂಪರ್ಕಗಳನ್ನು ಸ್ತಬ್ಧಗೊಳಿಸಿದೆ.
ಇದನ್ನೂ ಓದಿ:ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ
ನ್ಯೂ ಕುಂಜಂಗ್, ಫಿಯಾಂಗ್‌ಪುಯಿ, ಮೌಲ್ಹೋಯ್, ನಮ್‌ಝುರಾಂಗ್, ಸೌತ್ ಬಾಗೇಟರ್, ಮಹಾದೇವ್ ತಿಲ್ಲಾ, ಕಲಿಬರಿ, ನಾರ್ತ್ ಬಾಗೇಟರ್, ಜಿಯಾನ್ ಮತ್ತು ಲೋಡಿ ಪಂಗ್ಮೌಲ್ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 80 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.
“ಜಟಿಂಗ-ಹರಂಗಜಾವೋ ಮತ್ತು ಮಾಹುರ್-ಫೈಡಿಂಗ್ ರೈಲುಮಾರ್ಗವು ಭೂಕುಸಿತದಿಂದಾಗಿ ನಿರ್ಬಂಧಿಸಲ್ಪಟ್ಟಿದೆ. ಗೆರೆಮ್ಲಾಂಬ್ರಾ ಗ್ರಾಮದಲ್ಲಿ ಮೈಬಾಂಗ್ ಸುರಂಗವನ್ನು ತಲುಪುವ ಮೊದಲು, ಭೂಕುಸಿತದಿಂದಾಗಿ ರಸ್ತೆಯನ್ನು ನಿರ್ಬಂಧಿಸುವ ಸಾಧ್ಯತೆಯಿದೆ” ಎಂದು ಎಎಸ್‌ಡಿಎಂಎ ಹೇಳಿದೆ.