Advertisement

ಗ್ವಾಲಿಯರ್‌ : ಭಾರತೀಯ ವಾಯು ಪಡೆ ಪೈಲಟ್‌ಗಳ ರಫೇಲ್‌ ಹಾರಾಟ ತರಬೇತಿ

03:28 PM Sep 03, 2018 | udayavani editorial |

ಹೊಸದಿಲ್ಲಿ : ಹಿಂದಿನ ಯುಪಿಎ ಸರಕಾರ ಕುದುರಿಸಿದ್ದಕ್ಕಿಂತ ಅಧಿಕ ದರದಲ್ಲಿ ಫ್ರಾನ್ಸ್‌ನಿಂದ 36 ಫೈಟರ್‌ ಜೆಟ್‌ ಗಳನ್ನು ಕುದುರಿಸುವ ಮೂಲಕ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಸರಕಾರ ಭ್ರಷ್ಟಾಚಾರ ಎಸಗಿದೆ ಎಂಬ ಕಾಂಗ್ರೆಸ್‌ ಆರೋಪ ತಾರಕಕ್ಕೇರುತ್ತಿರುವ ನಡುವೆಯೇ ಗ್ವಾಲಿಯರ್‌ನ ಮಹಾರಾಜಪುರ ಏರ್‌ ಬೇಸ್‌ ನಲ್ಲಿ ಭಾರತೀಯ ವಾಯು ಪಡೆಯ ಅಭ್ಯಾಸಗಳು ಪ್ರಕೃತ ಜಾರಿಯಲ್ಲಿವೆ. 

Advertisement

ಈ ನಡುವೆ ಎನ್‌ಡಿಎ ಸರಕಾರ “ನಾವು ಅತ್ಯುತ್ತಮ ದರದಲ್ಲಿ ರಫೇಲ್‌ ಫೈಟರ್‌ ಜೆಟ್‌ ವಿಮಾನಗಳನ್ನು ಖರೀದಿಸಿದ್ದೇವೆ; ಹಿಂದಿನ ಯುಪಿಎ ಸರಕಾರ ಸಕಾಲದಲ್ಲಿ ಈ ವ್ಯವಹಾರವನ್ನು ಅಂತಿಮಗೊಳಿಸದೆ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿತ್ತು” ಎಂದು ಆರೋಪಿಸಿದೆ. 

ಗ್ವಾಲಿಯರ್‌ನಲ್ಲಿ ರಫೇಲ್‌ ಫೈಟರ್‌ ಜೆಟ್‌ ನಿನ್ನೆ ಭಾನುವಾರ ಲ್ಯಾಂಡ್‌ ಆಯಿತು. ಆಸ್ಟ್ರೇಲಿಯದಲ್ಲಿ ಈಚೆಗೆ ಫ್ರೆಂಚ್‌ ಪೈಲಟ್‌ಗಳು “ಎಕ್ಸರ್‌ಸೈಸ್‌ ಪಿಚ್‌ ಬ್ಲಾಕ್‌’ ಕೈಗೊಂಡು ಇಲ್ಲಿಗೆ ಮರಳಿ ಭಾರತೀಯ ವಾಯು ಪಡೆಯ ಪೈಲಟ್‌ಗಳಿಗೆ ಬಹು ಸ್ತರಗಳ ತರಬೇತಿಯನ್ನು ಆರಂಭಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next