Advertisement

ಪಾಕ್‌ನಲ್ಲಿರುವ ನಮ್ಮ ಪೈಲಟ್‌ ಸೇಫ್; ವಿಡಿಯೋ ಬಿಡುಗಡೆ 

03:53 PM Feb 27, 2019 | Team Udayavani |

ಹೊಸದಿಲ್ಲಿ: ಭಾರತೀಯ ವಾಯು ಪಡೆ ಕಾರ್ಯಾಚರಣೆಯಲ್ಲಿ ಬುಧವಾರ  ನಾಪತ್ತೆಯಾಗಿರುವ ಮಿಗ್‌ 21 ಪೈಲಟ್‌ ಅಭಿನಂದನ್‌ ಅವರು ಪಾಕಿಸ್ಥಾನ ಸೇನೆಯ ವಶದಲ್ಲಿ ಸುರಕ್ಷಿತವಾಗಿದ್ದಾರೆ . ಈ ಸಂಬಂಧ ವಿಡಿಯೋವೊಂದು ಹರಿದಾಡುತ್ತಿದ್ದು, ಅಭಿನಂದನ್‌ ಅವರು ಕಪ್‌ನಲ್ಲಿ ಚಹಾ ಸೇವಿಸುತ್ತಾ ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ.

Advertisement

ಪಾಕ್‌ನಲ್ಲಿ ಸೇನೆ ವಿಮಾನ ಹೊಡೆದುರುಳಿಸಿದ ಬಳಿಕ ಅಭಿನಂದನ್‌ ಅವರನ್ನು ಗ್ರಾಮಸ್ಥರು ಮುತ್ತಿಗೆ ಹಾಕಲು ಮುಂದಾದಾಗ ಸೇನೆ ರಕ್ಷಿಸಿ ವಶಕ್ಕೆ ಪಡೆದಿದ್ದು, ಸುರಕ್ಷಿತವಾಗಿ ನೋಡಿಕೊಂಡಿದೆ ಎಂದು ಅಭಿನಂದನ್‌ ಅವರ ಹೇಳಿಕೆಯಿಂದ ತಿಳಿದು ಬಂದಿದೆ. 

ಭಾರತದ ವಿದೇಶಾಂಗ ಇಲಾಖೆಯು ಅಭಿನಂದನ್‌ ಅವರ ಕುರಿತಾಗಿ ಪಾಕ್‌ ಬಳಿ ವಿವರಗಳನ್ನು ಕೇಳಿದೆ. 

ಪಾಕ್‌ ಸೇನಾ ಪಡೆಗಳ ವಶದಲ್ಲಿದ್ದ  ಅಭಿನಂದನ್‌ ಅವರ ರಕ್ತ ಸಿಕ್ತ ಮುಖದ ಫೋಟೋಗಳು ವೈರಲ್‌ ಆಗುವ ಮೂಲಕ ಭಾರತೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next