Advertisement

IAF ಅಧಿಕಾರಗಳ ಹತ್ಯೆ ಕೇಸು: ಯಾಸೀನ್‌ ಮಲಿಕ್‌ನನ್ನು ಗುರುತಿಸಿದ ಪ್ರತ್ಯಕ್ಷದರ್ಶಿ!

09:07 PM Jan 18, 2024 | Team Udayavani |

ಜಮ್ಮು: “1990ರ ಜ.25ರಂದು ಶ್ರೀನಗರದಲ್ಲಿ ತನ್ನ ಬಂದೂಕು ತೆಗೆದು ಭಾರತೀಯ ವಾಯು ಪಡೆಯ(ಐಎಎಫ್) ಅಧಿಕಾರಿಗಳ ಗುಂಪಿನ ಮೇಲೆ ಗುಂಡಿನ ಮಳೆ ಗ ರೆದಿದ್ದು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್‌ ಫ್ರಂಟ್‌(ಜೆಕೆಎಲ್‌ಎಫ್) ಮುಖ್ಯಸ್ಥ ಯಾಸೀನ್‌ ಮಲಿಕ್‌’.

Advertisement

ಹೀಗೆಂದು ಘಟನೆ ಯ ಪ್ರತ್ಯಕ್ಷದರ್ಶಿಯೊಬ್ಬರು ಗುರುವಾರ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಸಾಕ್ಷ್ಯ ನುಡಿದಿದ್ದಾರೆ. ದಾಳಿಯಲ್ಲಿ ಬದುಕುಳಿದಿದ್ದ ಐಎಎಫ್ ಮಾಜಿ ಅಧಿಕಾರಿ ರಾಜ್ವರ್‌ ಉಮೇಶ್ವರ್‌ ಸಿಂಗ್‌ ಅವರು ಈಗ ಮಲಿಕ್‌ನನ್ನು ಗುರುತಿಸಿ, ಈತನೇ ದಾಳಿಯ ಪ್ರಮುಖ ಶೂಟರ್‌ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.

1990ರ ಜ.25ರಂದು ಶ್ರೀನಗರದ ಹೊರವಲಯದ ರಾವಲೊ³ರಾದಲ್ಲಿ ಜೆಕೆಎಲ್‌ಎಫ್ ನಡೆಸಿದ ದಾಳಿಯಲ್ಲಿ ಐಎಎಫ್ನ ಸ್ಕ್ವಾಡರ್ನ್ ಲೀಡರ್‌ ರವಿ ಖನ್ನಾ ಸೇರಿದಂತೆ ನಾಲ್ವರು ಅಧಿಕಾರಿಗಳು ಮೃತಪಟ್ಟು, 40 ಮಂದಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next