Advertisement

IAF ಯೋಧರಿಂದ ಸತತ 34 ಗಂಟೆಗಳ ಕಾರ್ಯಾಚರಣೆ: ನಡುಗಡ್ಡೆಯಲ್ಲಿ ಸಿಲುಕಿದ್ದ 7 ಜನರ ರಕ್ಷಣೆ

09:39 AM Aug 28, 2020 | Nagendra Trasi |

ಜಮ್ಮು: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾಕಾಕಾರ ಮಳೆಯಿಂದಾಗಿ ಜಮ್ಮುವಿನ ವಿವಿಧ ತಗ್ಗು ಪ್ರದೇಶಗಳಲ್ಲಿ ಸಿಲುಕಕೊಂಡಿದ್ದ 34 ಮಂದಿಯನ್ನು ಭದ್ರತಾ ಪಡೆ ಕ್ಷಿಪ್ರವಾಗಿ ಕಾರ್ಯಾಚರಣೆಗಿಳಿಯುವ ಮೂಲಕ ರಕ್ಷಿಸಿರುವುದಾಗಿ ವರದಿ ತಿಳಿಸಿದೆ.

Advertisement

ಕಥುವಾ ಜಿಲ್ಲೆಯ ಧಾಲೋಟಿಯ 7 ಮಂದಿ, ಪೂಂಚ್ ಜಿಲ್ಲೆಯ ಗುರಾಸಯ್ ಪ್ರದೇಶದ 8 ಜನರು, ಖಾನೇಟಾರ್-ಸಾಲೋಟ್ರೈ ಪ್ರದೆಶದ 4 ಮಂದಿ, ಪೂಂಜ್ ನ 04 ಹಾಗೂ ಮಿನಿಬಸ್ ನಲ್ಲಿ ಸಿಲುಕಿಕೊಂಡಿದ್ದ 15 ಮಂದಿಯನ್ನು ಭದ್ರತಾ ಪಡೆಗಳು ರಕ್ಷಿಸಿರುವುದಾಗಿ ವರದಿ ವಿವರಿಸಿದೆ.

ಕಥುವಾ ಜಿಲ್ಲೆಯ ಉಜ್ ನದಿಯ ಎರಡು ತೊರೆಯ ನಡುವೆಯ ಸಿಲುಕಿಕೊಂಡಿದ್ದ ಏಳು ಮಂದಿಯನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸತತ 34 ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಿಸಿರುವ ಘಟನೆ ನಡೆದಿದೆ ಎಂದು ಜಮ್ಮು ಮೂಲದ ಆರ್ಮಿ ಪಿಆರ್ ಒ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.

ನದಿಯ ಎರಡು ತೊರೆಯ ನಡುವೆ ಏಳು ಮಂದಿ ಸಿಲುಕಿದ್ದು, ಅವರನ್ನು ರಕ್ಷಿಸಬೇಕೆಂದು ಕೋರಿ ಬಂದ ಸಂದೇಶವನ್ನು ಸ್ವೀಕರಿಸಿದ ನಂತರ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಎಂಐ 17 ಅನ್ನು ಜಮ್ಮುವಿನಿಂದ ಶೀಘ್ರವೇ ಸ್ಥಳಕ್ಕೆ ಕಳುಹಿಸಿ ಜನರನ್ನು ರಕ್ಷಿಸಲಾಗಿತ್ತು ಎಂದು ಹೇಳಿದರು.

Advertisement

“ ವಿಂಗ್ ಕಮಾಂಡರ್ ಮುಕುಲ್ ಖಾರೆ ಮತ್ತು ಸ್ಕ್ವಾಡ್ರನ್ ಮುಖಂಡ ವಿನಯ್ ಪಡಾಕಿ ಹೆಲಿಕಾಪ್ಟರ್ ಮೂಲಕ ಸ್ಥಳವನ್ನು ತಲುಪಿದ್ದರು. ನಂತರ ಸಿಬ್ಬಂದಿಗಳು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು” ಎಂದು ಲೆಫ್ಟಿನೆಂಟ್ ಕರ್ನಲ್ ಆನಂದ್ ತಿಳಿಸಿದ್ದಾರೆ.

ಭಾರೀ ಮಳೆಯ ನಡುವೆಯೇ ಎಂಐ 17 ಭದ್ರತಾ ಪಡೆ ಧೈರ್ಯದಿಂದ ಕಾರ್ಯಾಚರಣೆ ನಡೆಸಿ  ದ್ವೀಪ ಪ್ರದೇಶದಂತ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ಮಹಿಳೆಯರು, ಮೂವರು ಮಕ್ಕಳು ಸೇರಿದಂತೆ ಏಳು ಮಂದಿಯನ್ನು ರಕ್ಷಿಸಿರುವುದಾಗಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next